Log In
BREAKING NEWS >
ಜುಲಾಯಿ:28ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ತುಳಸಿ ಅರ್ಚನೆ ಜರಗಲಿದೆ....ಅಗಸ್ಟ್ 5ರಿ೦ದ 12ರವರೆಗೆ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 119ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರಗಲಿದೆ.

ನೋಯ್ಡಾ: ವಿಶ್ವದ ಅತೀ ದೊಡ್ಡ ಮೊಬೈಲ್‌ ಉತ್ಪಾದನಾ ಘಟಕ ಉದ್ಘಾಟನೆ

ನೋಯ್ಡಾ : ಪ್ರಧಾನಿ ನರೇಂದ್ರ ಮೋದಿ ಮತ್ತು ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್‌ ಜೇ ಇನ್‌ ಅವರು ಇಂದಿಲ್ಲಿ ಸ್ಯಾಮ್‌ಸಂಗ್‌ ಕಂಪೆನಿಯ ವಿಶ್ವದ ಅತೀ ದೊಡ್ಡ ಮೊಬೈಲ್‌ ಉತ್ಪಾದನಾ ಫ್ಯಾಕ್ಟರಿಯನ್ನು ಉದ್ಘಾಟಿಸಿದರು.

ಅತ್ಯಂತ ವೈಭವೋಪೇತವಾಗಿ ಸಂಭ್ರಮದಿಂದ ನಡೆದ ಈ ಕಾರ್ಯಕ್ರಮವು ಭಾರತ ಮತ್ತು ದಕ್ಷಿಣ ಕೊರಿಯ ನಡುವಿನ ಆರ್ಥಿಕ ನಂಟು ಸದೃಢಗೊಂಡಿರುವುದರ ಪ್ರತೀಕವಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ “ಇದೀಗ ಭಾರತವು ವಿಶ್ವದ ಎರಡನೇ ಅತೀ ದೊಡ್ಡ ಮೊಬೈಲ್‌ ಉತ್ಪಾದನಾ ದೇಶವಾಗಿದೆ’ ಎಂದು ಹೇಳಿದರು. ಭಾರತದಲ್ಲಿ ಕೊರಿಯದ ಉತ್ಪನ್ನ ಇಲ್ಲದೆ ಮಧ್ಯಮ ವರ್ಗದ ಮನೆಗಳೇ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂಬುದಾಗಿ ಮೋದಿ ಹೇಳಿದರು.

ಇಬ್ಬರೂ ನಾಯಕರು ನೂತನ ಬೃಹತ್‌ ಮೊಬೈಲ್‌ ಉತ್ಪಾದನಾ ಫ್ಯಾಕ್ಟರಿಯಲ್ಲಿ ಒಂದು ಸುತ್ತು ಬಂದು ಅತ್ಯಾಧುನಿಕ ತಂತ್ರಜ್ಞಾನದ ಪ್ರತೀಕವಾಗಿರುವ ವ್ಯವಸ್ಥೆಯನ್ನು ನೋಡಿ ಮೆಚ್ಚಿಕೊಂಡರು.

No Comments

Leave A Comment