Log In
BREAKING NEWS >
ನೀರಿನ ಕೊರತೆ: ಧರ್ಮಸ್ಥಳ ಪ್ರವಾಸ ಮುಂದೂಡಲು ಡಾ.ವೀರೇಂದ್ರ ಹೆಗ್ಗಡೆ ಮನವಿ....ಧರ್ಮಸ್ಥಳ ಅಷ್ಟೇ ಅಲ್ಲ, ಮಂತ್ರಾಲಯ, ಉಡುಪಿ ಸೇರಿದಂತೆ ಶ್ರೀಕ್ಷೇತ್ರಗಳಲ್ಲಿ ನೀರಿಗೆ ಹಾಹಾಕಾರ!...

ಜಪಾನ್‌ನಲ್ಲಿ ಪ್ರವಾಹ:76ಸಾವು

ಟೊಕಿಯೋ: ಮಳೆಯ ರೌದ್ರನರ್ತನಕ್ಕೆ ಜಪಾನ್‌ ಅಕ್ಷರಶಃ ತೊಯ್ದು ಹೋಗಿದ್ದು, 76 ನಾಗರಿಕರು ಸಾವನ್ನಪ್ಪಿ, 150 ಮಂದಿ ಕಾಣೆಯಾಗಿದ್ದಾರೆ.

ಒಕಯಮಾ, ಹಿರೋಶಿಮಾ ಮತ್ತಿತರ ಹಲವು ನಗರಗಳು ಜಲಾವೃತವಾಗಿವೆ. ಧಾರಾಕಾರ ಸುರಿದ ಮಳೆಯಿಂದ ದೊಡ್ಡ ಕೆರೆಗಳಂತೆ ಮಾರ್ಪಟ್ಟಿವೆ. ಮನೆಗಳ ಸುತ್ತಲೂ ನೀರು ಅವರಿಸಿರುವುದರಿಂದ ಜನರನ್ನು ಹೆಲಿಕಾಪ್ಟರ್‌ಗಳ ಮೂಲಕ ರಕ್ಷಿಸಲಾಗುತ್ತಿದೆ. ಹಲವೆಡೆ ಭೂಕುಸಿತ ಸಂಭವಿಸಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

ಹಲವು ನದಿಗಳು ಹಾಗೂ ಡ್ಯಾಂಗಳು ಭರ್ತಿಯಾಗಿ ಹರಿಯುತ್ತಿವೆ. ಪ್ರವಾಹಕ್ಕೆ ಸಿಲುಕಿರುವ 3.6 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.

No Comments

Leave A Comment