Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಟ್ರಂಪ್‌ ಗೆ ಶಾಕ್‌ ನೀಡಿದ ಮೋದಿ

ಹೊಸದಿಲ್ಲಿ: ಅಮೆರಿಕದ ಟ್ಯಾರಿಫ್ ಟ್ರೇಡ್‌ ವಾರ್‌ ನೊಳಗೆ ಕಾಲಿಟ್ಟಿರುವ ಭಾರತ ಕೂಡ ಅಲ್ಲಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ತೀರ್ಮಾನಿಸಿದೆ. ಈ ಮೂಲಕ ಅಮೆರಿಕದ ಉದ್ಧಟತನಕ್ಕೆ ಭಾರತ ಸರಿಯಾಗಿ ತಿರುಗೇಟು ನೀಡಿದೆ. ಒಟ್ಟು 29 ಉತ್ಪನ್ನಗಳ ಕಸ್ಟಮ್ಸ್‌ ಸುಂಕ ಹೆಚ್ಚಳ ಮಾಡಲು ಭಾರತ ಸರಕಾರ ನಿರ್ಧರಿಸಿದೆ. ಆ ಪೈಕಿ 28 ಸರಕುಗಳ ಮೇಲಿನ ಹೆಚ್ಚುವರಿ ತೆರಿಗೆ ತತ್‌ಕ್ಷಣಕ್ಕೆ ಜಾರಿಗೆ ಬಂದರೆ ಸಿಗಡಿ ಮೀನಿನ ಮೇಲಿನ ತೆರಿಗೆ ಹೇರಿಕೆ ಆ. 4ರಿಂದ ಜಾರಿಗೆ ಬರಲಿದೆ. ಅಮೆರಿಕದಿಂದ ಆಮ ದಾಗುತ್ತಿರುವ ಬಹಳಷ್ಟು ಕೃಷಿ ಮತ್ತು ಸ್ಟೀಲ್‌ ಉತ್ಪನ್ನಗಳ ದರ ಹೆಚ್ಚಾಗಲಿದೆ.

ಅಂದರೆ, ಬೋರಿಕ್‌ ಆ್ಯಸಿಡ್‌, ಅವರೆ (ಲೆಂಟಿಲ್‌) ಸಹಿತ 30 ವಸ್ತುಗಳ ಪಟ್ಟಿಯನ್ನು ವಿಶ್ವ ವ್ಯಾಪಾರ ಸಂಸ್ಥೆಗೆ ಕಳುಹಿಸಿಕೊಟ್ಟಿದೆ. ಯಾವ ಪದಾರ್ಥಕ್ಕೆ ಎಷ್ಟು ತೆರಿಗೆ ಹಾಕುತ್ತೇವೆ ಎಂದು ಈ ಪಟ್ಟಿಯಲ್ಲಿ ಮಾಹಿತಿ ನೀಡಲಾಗಿದ್ದು, ಈ ಸಂಬಂಧ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಸಿಗಡಿ ಮೇಲಿನ ತೆರಿಗೆಯನ್ನು ಶೇ.30ಕ್ಕೇರಿಸಲಾಗಿದ್ದರೆ, ಕಡಲೆ, ಕಡಲೆ ಬೇಳೆ, ತೊಗರಿ ಬೇಳೆಯ ಮೇಲಿನ ತೆರಿಗೆ ಶೇ.70ಕ್ಕೆ ಏರಿಸಲಾಗಿದೆ. ಇದರ ಜತೆಯಲ್ಲಿ ಸೇಬು, ಬಾದಾಮಿ ಮೇಲೂ ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ.


ಅಮೆರಿಕ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ದರ ಏರಿಕೆ ಮಾಡಿದ್ದನ್ನು ವಿರೋಧಿಸಿ ಈಗಾಗಲೇ ವಿಶ್ವ ವ್ಯಾಪಾರ ಸಂಸ್ಥೆಗೆ ದೂರು ನೀಡಿರುವ ಭಾರತ, ತಾನೂ ಅಮೆರಿಕದಿಂದ ಆಮದಾಗುವ ನಟ್‌, ಬೋಲ್ಟ್, ಸ್ಕ್ರ್ಯು ಸಹಿತ ಹಲವಾರು ವಸ್ತುಗಳ ಮೇಲೆ ಇನ್ನಷ್ಟು ಆಮದು ಸುಂಕ ವಿಧಿಸಿದೆ.ಅಮೆರಿಕವು ತಾನು ಆಮದು ಮಾಡಿಕೊಳ್ಳುತ್ತಿರುವ ಸರಕುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಈ ವ್ಯಾಪಾರ ಸಮರಕ್ಕೆ ನಾಂದಿ ಹಾಡಿತ್ತು. ತದನಂತರ ಐರೋಪ್ಯ ಒಕ್ಕೂಟ ಹಾಗೂ ಚೀನ ಕೂಡ ತಿರುಗೇಟು ನೀಡಿ ಅಮೆರಿಕದ ಉತ್ಪನ್ನಗಳಿಗೆ ಆಮದು ಸುಂಕ ಹೆಚ್ಚಳ ಮಾಡಿದ್ದವು.

No Comments

Leave A Comment