Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಮೋದಿ ಸರ್ಕಾರದ ವಿರುದ್ಧ ಹೇಳಿಕೆ; ಯೂ-ಟರ್ನ್ ಹೊಡೆದ ಪೇಜಾವರ ಶ್ರೀ

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಇದೀಗ ಹೇಳಿಕೆ ಕುರಿತಂತೆ ಯೂ-ಟರ್ನ್ ಹೊಡೆದಿದ್ದು, ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಂಗಳವಾರ ಹೇಳಿದ್ದಾರೆ.
ತಮ್ಮ ಹೇಳಿಕೆ ಕುರಿತಂತೆ ಮೈಸೂರಿನ ಮಾಧ್ವ ವಿದ್ಯಾರ್ಥಿ ನಿಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃದತ್ವದ ಕೇಂದ್ರದ ಬಿಜೆಪಿ ಸರ್ಕಾರದ ಬಗ್ಗೆ ನಾನು ಅಸಮಾಧಾನ ವ್ಯಕ್ತಪಡಿಸಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಆಡಳಿತದ ವಿಚಾರವಾಗಿ ನಾನು ಕೆಲ ದಿನಗಳ ಹಿಂದಷ್ಟೇ ಉಡುಪಿಯಲ್ಲಿ ಮಾತನಾಡಿದ್ದೆ. ಅದು ಮಾತನಾಡುವಾಗ ಸರಿಯಾಗಿ ಮೈಕ್ ಇರಲಿಲ್ಲ. ಅದು ಕೆಲವರಿಗೆ ಸರಿಯಾಗಿ ಕೇಳಿಸದೆ ತಪ್ಪಾಗಿ ಅರ್ಥೈಸಲಾಗಿದೆ.
ನಾನು ಮೋದಿ ಸರ್ಕಾರದ ಬಗ್ಗೆ ಎಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಮೋದಿ ಸರ್ಕಾರ ಭ್ರಷ್ಟಾಚಾರ ರಹಿಸ ಸರ್ಕಾರವಾಗಿದ್ದು, ದೇಶದ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿದೆ. ಗಂಗಾ ನದಿ ಶುಚಿತ್ವ ಹಾಗೂ ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರದಿರುವುದರ ಬಗ್ಗೆ ಉತ್ತಮ ಸಾಧನೆಯಾಗಿಲ್ಲ ಎಂದು ಅತೃಪ್ತಿಯನ್ನಷ್ಟೇ ವ್ಯಕ್ತಪಡಿಸಿದ್ದೇನೆ. ಆದರೆ, ಮೋದಿ ಸರ್ಕಾರದ ಎಲ್ಲಾ ಕೆಲಸಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದ್ದಾರೆ.
ನನ್ನ ಹೇಳಿಕೆಯಿಂದ ಹೊಸ ಚರ್ಚೆ ಆರಂಭಗೊಂಡಿದೆ. ಹೀಗಾಗಿ ತರಾತುರಿಯಲ್ಲಿ ಸ್ಪಷ್ಟೀಕರಣ ನೀಡುತ್ತಿದ್ದೇನೆ. ನಾನು ಒಂದು ಪಕ್ಷ ಅಥವಾ ವ್ಯಕ್ತಿಯ ಪರವಾಗಿಲ್ಲ. ಪಕ್ಷಾತೀತವಾಗಿ ನಾನು ಸಲಹೆ ಹಾಗೂ ಸೂಚನೆಗಳನ್ನು ಕೊಡುತ್ತೇನೆ. ಅದೇ ರೀತಿ ಮೋದಿ ಸರ್ಕಾರಕ್ಕೂ ಸಲಹೆ, ಸೂಚನೆ ನೀಡಿದ್ದೇನೆ. ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆಂದಿದ್ದಾರೆ.
ನನಗೆ ಮೋದಿಯವರ ಬಗ್ಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ಯಾರೂ ಹಾಗೆ ಭಾವಿಸಬೇಕಿಲ್ಲ. ನಾನು ಹೇಳಿಕೆ ನೀಡಿದ ನಂತರ ಯಾವುದೇ ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಯಾರೂ ಸಹ ಸ್ಪಷ್ಟೀಕರಣ ನೀಡಿ ಎಂದೂ ಕೇಳಿಲ್ಲ. ಸ್ವ ಇಚ್ಛೆಯಿಂದ ನಾನು ಸ್ಪಷ್ಟೀಕರಣ ನೀಡುತ್ತಿದ್ದೇನೆ. ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣಕ್ಕೆ ನಾನು ಸ್ಪಷ್ಟೀಕರಣ ನೀಡಿದ್ದೇನೆ. ಈ ಚರ್ಚೆಯನ್ನು ಇಲ್ಲಿಗೆ ಬಿಡಬೇಕೆಂದು ಹೇಳಿದರು.
No Comments

Leave A Comment