Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಕಾಶ್ಮೀರ :ಗಡಿ ನುಸುಳುತ್ತಿದ್ದ ಐವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ : ಶನಿವಾರ ನಸುಕಿನ ವೇಳೆ ಪಾಕಿಸ್ಥಾನ ಕಡೆಯಿಂದ ಭಾರತದ ಗಡಿಯೊಳಗೆ ನುಸುಳುವ ಉಗ್ರರ ತಂಡದ ಯತ್ನವನ್ನು ಭಾರತೀಯ ಸೇನೆ ವಿಫ‌ಲಗೊಳಿಸಿದ್ದು, ಗುಂಡಿನ ಮಳೆಗೆರೆದು ಐವರು ಉಗ್ರರನ್ನು ಹತ್ಯೆಗೈದಿದ್ದಾರೆ.

ಉಗ್ರರ ತಂಡದಲ್ಲಿ ಎಷ್ಟು ಮಂದಿ ಇದ್ದರು ಎನ್ನುವುದು ತಿಳಿದು ಬಂದಿಲ್ಲ ಆದರೆ ಐವರನ್ನು ಸೇನಾ ಪಡೆಗಳು ಹತ್ಯೆಗೈದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಕಾರ್ಯಾಚರಣೆ ವೇಳೆ ಸೇನಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಪಾಕ್‌ ಸೇನೆಯೂ ಉಗ್ರರಿಗೆ ನೆರವಾಗುತ್ತಿದ್ದು , ಗಡಿಯಲ್ಲಿ ನಿರಂತರ ಮೋರ್ಟಾರ್‌ ಶೆಲ್‌ ದಾಳಿ ನಡೆಸುತ್ತಿದೆ. ಗಡಿಯಲ್ಲಿ ಬಿಎಸ್‌ಎಫ್ ಯೋಧರು ಹದ್ದಿನ ಕಣ್ಣು ಇರಿಸಿ ಕಾವಲು ಕಾಯುತ್ತಿದ್ದಾರೆ.

No Comments

Leave A Comment