Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ಹಠಾತ್‌ ಹದಗೆಟ್ಟ ಲಾಲು ಆರೋಗ್ಯ: IGIMS ಆಸ್ಪತ್ರೆಗೆ ದಾಖಲು

ಪಟ್ನಾ : ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಆರೋಗ್ಯ ಇಂದು ಶನಿವಾರ ಬೆಳಗ್ಗೆ ಹಠಾತ್‌ ಹದಗೆಟ್ಟ ಕಾರಣ ಅವರನ್ನು ಒಡನೆಯೇ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸಯನ್ಸಸ್‌ (IGIMS) ಆಸ್ಪತ್ರೆಗೆ ಒಯ್ಯಲಾಯಿತು.

ಈ ದಿನಗಳಲ್ಲಿ ಜಾಮೀನಿನಲ್ಲಿ ಜೈಲಿನಿಂದ ಹೊರಗಿರುವ ಲಾಲು ಅವರು ಇಂದು ಬೆಳಗ್ಗೆ ಉಸಿರಾಟದ ತೊಂದರೆಯನ್ನು ದೂರಿಕೊಂಡಾಗ ಅವರನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ.

ಬಹುಕೋಟಿ ವೇವು ಹಗರಣಗಳಲ್ಲಿ ಅಪರಾಧಿಯಾಗಿ ಜೈಲು ಪಾಲಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್‌ ಅವರಿಗೆ ಕಳೆದ ಮೇ 11ರಂದು ರಾಂಚಿ ಹೈಕೋರ್ಟ್‌ ಆರು ವಾರಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿತ್ತು.

No Comments

Leave A Comment