Log In
BREAKING NEWS >
ಮೇ 29ಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ....ಮೇ 29ರಂದು ಮಂಡ್ಯದಲ್ಲಿ ಸ್ವಾಭಿಮಾನದ ವಿಜಯೋತ್ಸವ: ಸುಮಲತಾ ಅಂಬರೀಶ್....

ಕಾಮನ್ವೆಲ್ತ್ ಗೇಮ್ಸ್ 2018: ಜಾವಲಿನ್ ಥ್ರೋನಲ್ಲಿ ಇದೇ ಮೊದಲ ಬಾರಿ ಭಾರತಕ್ಕೆ ಚಿನ್ನ

ಗೋಲ್ಡ್ ಕೋಸ್ಟ್: ಆಸ್ಪ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟ 2018ರಲ್ಲಿ ಮೊದಲ ಬಾರಿಗೆ ನೀರಜ್ ಚೋಪ್ರಾ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

20 ವರ್ಷದ ನೀರಜ್ ಚೋಪ್ರಾ ಅವರು ಫೈನಲ್ ನಲ್ಲಿ 86.47 ಮೀಟರ್ ದೂರಕ್ಕೆ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತೀಯ ಚಿನ್ನದ ಪದಕ ಬೇಟೆ ಮುಂದುವರೆದಿದೆ. 21 ಚಿನ್ನ, 13 ಬೆಳ್ಳಿ, 14 ಕಂಚಿನ ಪದಕದ ಮೂಲಕ ಒಟ್ಟಾರೆ 48 ಪದಕಗಳನ್ನು ಗೆದ್ದಿದೆ.

No Comments

Leave A Comment