Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಕಾಮನ್ವೆಲ್ತ್‌ ಪುರುಷರ ಟೇಬಲ್‌ ಟೆನಿಸ್‌: ಭಾರತಕ್ಕೆ 9ನೇ ಚಿನ್ನ

ಗೋಲ್ಡ್‌ ಕೋಸ್ಟ್‌ : ಇಲ್ಲೀಗ ಸಾಗುತ್ತಿರುವ 2018ರ ಕಾಮನ್ವೆಲ್ತ್‌ ಗೇಮ್ಸ್‌ನ ಐದನೇ ದಿನವಾದ ಇಂದು ಭಾರತ, ಪುರುಷರ ಟೇಬಲ್‌ ಟೆನಿಸ್‌ ತಂಡ ಸ್ಪರ್ಧೆಯಲ್ಲಿ ನೈಜೀರಿಯವನ್ನು 3-0 ಅಂತರದಲ್ಲಿ ಸೋಲಿಸುವ ಮೂಲಕ 9ನೇ ಚಿನ್ನದ ಪದಕವನ್ನು ಗೆದ್ದುಕೊಂಡಿತು.

ಸತಿಯನ್‌ ಜ್ಞಾನಶೇಖರನ್‌ ಮತ್ತು ಹರ್‌ಮೀತ್‌ ದೇಸಾಯಿ ಅವರು ಮೂರನೇ ಪಂದ್ಯವನ್ನು 11-8, 11-5, 11-3 ಅಂತರದಲ್ಲಿ ಗೆಲ್ಲುವ ಮೂಲಕ ಭಾರತಕ್ಕೆ ಚಿನ್ನದ ಪದಕ ಪ್ರಾಪ್ತವಾಯಿತು.

ಐದನೇ ದಿನವಾದ ಇಂದು ಭಾರತ ಒಟ್ಟು  9 ಚಿನ್ನ, 4 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಗೆಲ್ಲುವ ಮೂಲ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿತು.

ಪುರುಷರ 10 ಎಂ ಏರ್‌ ಪಿಸ್ಟಲ್‌ ಸ್ಪರ್ಧೆಯಲ್ಲಿ ಜೀತೂ ರಾಯ್‌ ಅವರು ಚಿನ್ನ ಮತ್ತು ಓಂ ಪ್ರಕಾಶ್‌ ಅವರು ಕಂಚಿನ ಪದಕವನ್ನು ಗೆದ್ದುಕೊಂಡರು.

ಅನಂತರ ಮೆಹೂಲಿ ಘೋಷ್‌ ಮತ್ತು ಅಪೂರ್ವಿ ಚಂಡೇಲಾ ಅವರು ಮಹಿಳೆಯರ 10 ಎಂ ಏರ್‌ ಪಿಸ್ಟರ್‌ ಫೈನಲ್‌ನಲ್ಲಿ ಅನುಕ್ರಮವಾಗಿ 2 ಮತ್ತು 3ನೇ ಸ್ಥಾನಿಯಾಗಿ ಜಯ ಸಾಧಿಸಿದರು.

ವೇಟ್‌ ಲಿಫ್ಟರ್‌ ಪ್ರದೀಪ್‌ ಸಿಂಗ್‌ ಅವರು ಪುರುಷರು 105 ಕಿಲೋ ವಿಭಾಗದಲ್ಲಿ ಬೆಳ್ಳಿ ಗೆದ್ದರು.

No Comments

Leave A Comment