Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ಕಾನ್ಪುರ:ಅಮಾನ್ಯಗೊಂಡ 96 ಕೋಟಿ ರೂ ಕಪ್ಪು ಹಣ ಪತ್ತೆ!

ಕಾನ್ಪುರ: ನೋಟು ನಿಷೇಧ ಗೊಂಡು ವರ್ಷದ ಬಳಿಕ ಉತ್ತರಪ್ರದೇಶದ ಔದ್ಯೋಗಿಕ ರಾಜಧಾನಿ ಎನಿಸಿಕೊಳ್ಳುವ ಕಾನ್ಪುರದಲ್ಲಿ ಬರೋಬ್ಬರಿ 96 ಕೋಟಿ ರೂ ಮೌಲ್ಯದ ಅಮಾನ್ಯಗೊಂಡ ನೋಟುಗಳು ಪತ್ತೆಯಾಗಿವೆ. ಈ ಸಂಬಂಧ ಪೊಲೀಸರು 16 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ವ್ಯಾಪಾರಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುವ ವೇಳೆ ಅಪಾರ ಪ್ರಮಾಣದ ಕಪ್ಪು ಹಣ ಪತ್ತೆಯಾಗಿದೆ.

ಮೊದಲು ಇಬ್ಬರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಅಪಾರ ಪ್ರಮಾಣದ ಕಪ್ಪು ಹಣ ಪತ್ತೆಯಾಗಿದ್ದು, ಜಾಡು ಬೆನ್ನಟ್ಟಿ ಹೋದಾಗ ಇನ್ನೂ ಕೆಲ ವ್ಯಾಪಾರಿಗಳ ಬಳಿ ಅಪಾರ ಹಣ ಪತ್ತೆಯಾಗಿದೆ. ವಶಕ್ಕೆ ಪಡೆದವರಲ್ಲಿ ಇಬ್ಬರು ಹೈದರಾಬಾದ್‌ ಮೂಲದವರೂ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment