Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಢಾಕಾ(ಬಾಂಗ್ಲಾದೇಶ): ಮೊಹಮ್ಮದ್ ಪೈಗಂಬರ್ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆಂಬ ಸುದ್ದಿಗೆ ರೊಚ್ಚಿಗೆದ್ದ ಜನರು 30ಕ್ಕೂ ಹೆಚ್ಚು ಹಿಂದೂಗಳ ಮನೆಗಳನ್ನು ಸುಟ್ಟು ಲೂಟಿ ಮಾಡಿರುವ ಘಟನೆ ವರದಿಯಾಗಿದೆ. ಬಾಂಗ್ಲಾದೇಶದ ರಾಜಧಾನಿಯಿಂದ 300 ಕಿ.ಮೀ ದೂರದಲ್ಲಿರುವ ರಂಗಪುರ್ ಜಿಲ್ಲೆಯ ಠಾಕೂರ್ ಬರಿ ಗ್ರಾಮದಲ್ಲಿ ಉದ್ರಿಕ್ತ ಜನರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ್ದು ಉದ್ರಿಕ್ತರನ್ನು

ಕಾಬೂಲ್: ಇರಾನಿನ ಚಬಹಾರ್ ಬಂದರು ಮೂಲಕ ಭಾರತ ಕಳುಹಿಸಿದ ಮೊದಲ ಸಾಗಣೆ ಹಡಗು ಶನಿವಾರ ಆಫ್ಗಾನಿಸ್ತಾನಕ್ಕೆ ತಲುಪಿದೆ. ಮೊದಲ ಸಾಗಣೆ ಹಡಗಿನಲ್ಲಿ ಭಾರತವು ಆಫ್ಗಾನಿಸ್ತಾನಕ್ಕೆ ಗೋಧಿಯನ್ನು ಸರಬರಾಜು ಮಾಡಿದ್ದು ಇದು ಚಬಹಾರ್ ಬಂದುರ ಮಾರ್ಗದ ಮೊದಲ ಹೆಗ್ಗುರುತ ಸಾಗಣೆಯಾಗಿತ್ತು. ಮೊದಲ ಸಾಗಣೆ ಹಡಗು ಬಂದರಿಗೆ ಬಂದಾಕ್ಷಣ ಹಿರಿಯ ಆಫ್ಘಾನ್ ಅಧಿಕಾರಿಗಳು ಮತ್ತು

ಕೋಲಾರ: ಡಿಸೆಂಬರ್ 19ರಂದು ಹೊಸ ರಾಜಕೀಯ ಪಕ್ಷ ಘೋಷಿಸುವುದಾಗಿ ಮಾಜಿ ಸಚಿವ ಹಾಗೂ ಹಾಲಿ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಅವರು ಶನಿವಾರ ಹೇಳಿದ್ದಾರೆ. ಈ ಕುರಿತು ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ವರ್ತೂರ್ ಪ್ರಕಾಶ್ ಅವರು, ಹೊಸ ರಾಜಕೀಯ ಪಕ್ಷ ರಚನೆಗೆ ಸಂಬಂಧಿಸಿದಂತೆ

ಬೆಂಗಳೂರು: 'ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು ಅರುಳು ಮರಳು, ಹೀಗಾಗಿ ನನ್ನ ವಿರುದ್ಧ ಮನಸ್ಸಿಗೆ ಬಂದಂತೆ ಸುಳ್ಳು ಆರೋಪ ಮಾಡುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನುಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದರು.'ಬಿಜೆಪಿಗರು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡುತ್ತಾರೆ.

ಕುಂದಾಪುರ : ತಾಂತ್ರಿಕ ತೊಡಕಿನಿಂದಾಗಿ  ಬಿಜೆಪಿ ಸೇರ್ಪಡೆ ಸಾಧ್ಯವಾಗಿಲ್ಲ.ಆದರೆ ಶೀಘ್ರವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳುವುದಾಗಿ  ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ಅವರು ಹೇಳಿದ್ದಾರೆ. ಶನಿವಾರ ಕುಂದಾಪುರದ ಪ್ರಸ್‌ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸೇರ್ಪಡೆ ಹಾಗೂ ತನ್ನ ಮೇಲಿನ ಕೆಲ ಆರೋಪಗಳ ಕುರಿತು ಸ್ಪಷ್ಟನೆ ನೀಡಿದರು. ಇದೆ ವೇಳೆ  ಬಿಜೆಪಿಯ

ಬೆಂಗಳೂರು: ಹೆಣ್ಣು ಮಗು ಜನಿಸಿದ ಕಾರಣಕ್ಕೆ ಅತ್ತೆ ಮನೆಯವರು ಮಾಡಿದ ಹಲ್ಲೆಯಿಂದಾಗಿ 29 ವರ್ಷದ ಮಹಿಳೆಯೊಬ್ಬರು ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹರ್ಷಿತಾ ಆಸ್ಪತ್ರೆ ಸೇರಿರುವ ಮಹಿಳೆ, ಕಳೆದ ಮೂರು ವರ್ಷಗಳ ಹಿಂದೆ ಹರ್ಷಿತಾ ಮತ್ತು ಚೇತನ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಅಂದಿನಿಂದ ಇಂದಿನವರೆಗೆ

ಲಕ್ನೋ: ಆದಾಯ ತೆರಿಗೆ ಇಲಾಖೆ (ಐಟಿ) ಉತ್ತರ ಪ್ರದೇಶ ನೀರಾವರಿ ವಿಭಾಗದ ಇಂಜಿನಿಯರ್ ಒಬ್ಬರಿಂದ 50 ಕೋಟಿ ರೂ.ಗೆ ಅಧಿಕ ಮೊತ್ತದ ಸಂಪತ್ತನ್ನು ವಶಕ್ಕೆ ಪಡೆದಿದೆ. ದೆಹಲಿ, ನೊಯ್ಡಾ, ಘಾಜಿಯಾಬಾದ್, ಗುರುಗ್ರಾಮ ಮತ್ತು ಇಟಾಹ್ ಸೇರಿದಂತೆ ಏಳು ನಗರಗಳ 22 ಸ್ಥಳಗಳಲ್ಲಿ ಐಟಿ ದಾಳಿ ನಡೆಸಲಾಗಿದ್ದು ರಾಜೇಶ್ವರ್ ಸಿಂಗ್ ಯಾದವ್

ಬೆಂಗಳೂರು: ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ ಈಗ ಮೂರನೇ ಬಾರಿಗೆ ಸಮ-ಬೆಸ ಸಂಖ್ಯೆಯ ನಿಯಮ ಜಾರಿಗೆ ತರುತ್ತಿದ್ದು, ಈ ಬಾರಿ ಅಲ್ಲಿ ಯಶಸ್ವಿಯಾದರೆ ಅದನ್ನು ಬೆಂಗಳೂರಿನಲ್ಲೂ ಜಾರಿಗೊಳಿಸುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಶನಿವಾರ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ಭಿಂಡಿ ಬಜಾರಿನ ಉಪಾಹಾರ ಗೃಹವನ್ನು ಖರೀದಿಸಿರುವ ಕಟ್ಟಾರ್ ಹಿಂದುತ್ವವಾದಿ ನಾಯಕ ಸ್ವಾಮಿ ಚಕ್ರಪಾಣಿ ಅವರು ಅದನ್ನು ಸಾರ್ವಜನಿಕ ಶೌಚಾಲಯವಾಗಿ ಪರಿವರ್ತಿಸಲು ಮುಂದಾಗಿದ್ದಾರೆ. 1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್ ಹೆಸರಿನಲ್ಲಿ ಬೆಲೆಬಾಳುವ ಅನೇಕ ಸ್ವತ್ತುಗಳು ಭಾರತದಲ್ಲಿದ್ದು ಅವೆಲ್ಲವನ್ನೂ ಸ್ವಾದೀನಕ್ಕೆ ತೆಗೆದುಕೊಂಡಿರುವ ಕೇಂದ್ರ

ರಾಂಚಿ : ಫ‌ತ್ವಾ ಹೊರಡಿಸಲಾಗಿದ್ದ ಯೋಗ ಶಿಕ್ಷಕಿ ರಾಫಿಯಾ ನಾಝ್ ಅವರ  ನಿವಾಸದ ಮೇಲೆ ಶುಕ್ರವಾರ ರಾತ್ರಿ  ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಖಾಸಗಿ  ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುವ ವೇಳೆಯಲ್ಲೇ ಮನೆಯ ಸುತ್ತುವರಿದಿದ್ದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ರಾಫಿಯಾ ನಾಝ್ ಅವರಿಗೆ ಪೊಲೀಸ್‌ ಭದ್ರತೆ ಒದಗಿಸಿದ ಹೊರತಾಗಿಯೂ