Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಮಂಗಳೂರು : ಟಾರ್ಗೆಟ್‌ ಗ್ರೂಪ್‌ನ ರೌಡಿ ಇಲ್ಯಾಸ್‌ ಬರ್ಬರ ಹತ್ಯೆ

ಮಂಗಳೂರು: ನಗರದಲ್ಲಿ ಕುಖ್ಯಾತಿ ಪಡೆದಿರುವ ಟಾರ್ಗೆಟ್‌ ಗ್ರೂಪ್‌ನ ನಟೋರಿಯಸ್‌ ರೌಡಿ  ಇಲ್ಯಾಸ್‌ ನನ್ನು ಬರ್ಬರವಾಗಿ ಹತ್ಯೆಗೈಯಲಾಗಿರುವ ಬಗ್ಗೆ ವರದಿಯಾಗಿದೆ.

ಶನಿವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಚಾಕುವಿನಿಂದ ಇರಿದು ಇಲ್ಯಾಸ್‌ನನ್ನು ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದ್ದು, ಇದು ಒಂದೇ ಕೋಮಿನವರ ಗ್ಯಾಂಗ್‌ವಾರ್‌ ನಲ್ಲಿ ಹತ್ಯೆ ಗೈಯಲಾಗಿದೆ ಎಂದು ಹೇಳಲಾಗಿದೆ.

ಕಳೆದ 2 ದಿನಗಳ ಹಿಂದೆ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಇಲ್ಯಾಸ್‌ ಜಪ್ಪಿನಮೊಗರು ಮನೆಯಲ್ಲಿದ್ದ ವೇಳೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ.

ದಾಳಿ ವೇಳೆಇಲ್ಯಾಸ್‌ ಎದೆಗೆಇಬ್ಬರು ದುಷ್ಕರ್ಮಿಗಳು  ಇರಿದು ಪರಾರಿಯಾಗಿದ್ದು, ಆತನನ್ನು ಕೂಡಲೆ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಇಲ್ಯಾಸ್‌ ಸಚಿವ ಯು.ಟಿ.ಖಾದರ್‌ ಅವರೊಂದಿಗಿದ್ದ ಫೋಟೋ ವೈರಲ್‌ ಆಗಿ ಭಾರೀ ಸುದ್ದಿಯಾಗಿತ್ತು. ಇಲ್ಯಾಸ್‌ ಈ ಹಿಂದೆ ಉಳ್ಳಾಲ ಯುವ ಕಾಂಗ್ರೆಸ್‌ ಉಪಾಧ್ಯಕ್ಷನೂ ಆಗಿದ್ದ.

 ಈ ಬಗ್ಗೆ ಸಚಿವ ಖಾದರ್‌ ಅವರು  ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆಯನ್ನೂ ನೀಡಿದ್ದರು. ನನಗೂ ಇಲ್ಯಾಸ್‌ಗೂ ಯಾವುದೇ ವ್ಯವಹಾರವಾಗಲಿ ನಂಟಾಗಲಿ ಇಲ್ಲ ಎಂದಿದ್ದರು.

ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡು ಬಿಗಿ ಭದ್ರತೆ ಕೈಗೊಂಡಿದ್ದಾರೆ.

No Comments

Leave A Comment