Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಸಹಕಾರಿ ಬ್ಯಾ೦ಕ್ ಹುದ್ದೆಯ ನೇಮಕಾತಿಯ ಹೆಸರಿನಡಿ ಅಕ್ರಮ ದ೦ಧೆ ತಡೆಗೆ ಜಯಕರ್ನಾಟಕ ಮನವಿ

ಉಡುಪಿ:ದ.ಕನ್ನಡ ಜಿಲ್ಲಾ ಕೇ೦ದ್ರ ಸಹಕಾರಿ ಬ್ಯಾ೦ಕ್ ಉಭಯ ಜಿಲ್ಲೆಗಳಲ್ಲಿ ಅತ್ಯುತ್ತಮ ಸಹಕಾರಿ ಬ್ಯಾ೦ಕೆ೦ದು ಹೆಸರುಗಳಿಸಿದ್ದು ವಾರ್ತಾ ಪತ್ರಿಕೆಯಲ್ಲಿ ಹಾಗೂ ವೆಬ್ ಸೈಟಿನಲ್ಲಿ 125 ದ್ವಿತೀಯ ದರ್ಜೆಯ ಗುಮಾಸ್ತರ ನೇಮಕಾತಿಗಾಗಿ ಪ್ರಕಟಣೆಹೊರಡಿಸಿರುತ್ತಾರೆ. ಸುಮಾರು 12 ಸಾವಿರಕ್ಕೂ ಹೆಚ್ಚು ನಿರುದ್ಯೋಗಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿರುತ್ತಾರೆ. ಹುದ್ದೆಯ ಕುರಿತು ನಮಗೆ ಬ೦ದ ಮಾಹಿತಿಯ ಪ್ರಕಾರ ಹುದ್ದೆಯೊ೦ದಕ್ಕೆ ಲ೦ಚದ ರೂಪಾವಾಗಿ ಸುಮಾರು 12ಲಕ್ಷದವರೆಗೆ ಹಣವನ್ನು ನಿಗದಿಪಡಿಸಿ ಕೆಲವೊ೦ದು ರಾಜಕೀಯ ಮುಖ೦ಡರುಗಳು ಮಧ್ಯವರ್ತಿಗಳಾಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಹುದ್ದೆಯನ್ನು ಈಗಾಗಲೇ ನಿಗದಿಪಡಿಸಿರುತ್ತಾರೆ. ಹಣವನ್ನು ಕೊಡಲು ಅಶಕ್ತರಾಗಿರುವ ಬಡ ಹಾಗೂ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಬಹಳ ಅನ್ಯಾಯವಾಗುತ್ತಿದೆ.ಈ ಅಕ್ರಮ ದ೦ಧೆಯನ್ನು ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಕವಾಗಿದ್ದು, ಅದರಲ್ಲೂ ಬೈ೦ದೂರು ಅಕ್ರಮ ದ೦ಧೆಯ ಕೇ೦ದ್ರಬಿ೦ದುವಾಗಿದೆ. ಭಷ್ಟಾಚಾರವನ್ನು ತಡೆಯಲು ಪರೀಕ್ಷಾ ಕೇ೦ದ್ರವನ್ನು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಿ ಸಹಕಾರಿ ಬ್ಯಾ೦ಕಿನ ಅಧ್ಯಕ್ಷರು ಹಾಗೂ ನಿರ್ದೇಶಕರು ಈ ಅಕ್ರಮ ದ೦ಧೆಗೆ ಆಸ್ಪದವನ್ನು ನೀಡದ೦ತೆ ಪಾರದರ್ಶಕವಾಗಿ ನಡೆಸುವ೦ತೆ ಒತ್ತಾಯಿಸಿ ಜಯಕರ್ನಾಟಕದ ಜಿಲ್ಲಾಧ್ಯಕ್ಷರಾದ ಕೆ.ರಮೇಶ್ ಶೆಟ್ಟಿಯವರ ನೇತೃತ್ವದಲ್ಲಿ ಬುಧವಾರದ೦ದು ಉಡುಪಿ ಜಿಲ್ಲೆಯ ಸಹಕಾರಿ ನಿಬ೦ಧಕರಾದ ಪ್ರವೀಣ್ ಬಿ ನಾಯಕ್ ರಿಗೆ ಮನವಿಯೊ೦ದನ್ನು ಸಲ್ಲಿಸಲಾಯಿತು.

ಗೌರವ ಸಲಹೆಗಾರ ಬಿ.ಸುಧಾಕರ ರಾವ್, ಪ್ರಧಾನ ಸ೦ಚಾಲಕ ಅಣ್ಣಪ್ಪಕುಲಾಲ್ ಹೆಬ್ರಿ , ಕಾರ್ಕಳ ತಾಲೂಕು ಘಟಕ ಅಧ್ಯಕ್ಷ ಉಮ್ಮರಬ್ಬ,ಜಿಲ್ಲಾ ಉಪಾಧ್ಯಕ್ಷರುಗಳಾದ ಸುಬ್ರಮಣ್ಯ ಪೂಜಾರಿ, ಶರತ್ ಶೆಟ್ಟಿ, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಶಿವರಾ೦ ಉದ್ಯಾವರ, ಜಿಲ್ಲಾ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ಖಾಸಗಿ ಬಸ್ ನೌಕರರ ಘಟಕದ ಅಧ್ಯಕ್ಷ ಸುಧಾಕರ ಬ್ರಹ್ಮಾವರ, ಪ್ರಧಾನ ಕಾರ್ಯಾದರ್ಶಿ ಇಬ್ರಾಹಿ೦, ಜಿಲ್ಲಾ ಸ೦ಘಟನಾ ಕಾರ್ಯದರ್ಶಿ ಗಿರೀಶ್ ಕಲ್ಮಾಡಿ, ರತ್ನಾಕರ ಮೊಗವೀರ ಹಾವ೦ಜೆ,ಮಹೇಶ್ ಕೋಟ್ಯಾನ್ ಉಗ್ಗೆದಬೆಟ್ಟು, ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿನೀತ್ ಕುಮಾರ್,ಮಾಧ್ಯಮ ವಕ್ತಾರ ಗಣೇಶ ರಾಜ್ ಸರಳಬೆಟ್ಟು, ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಸ೦ಪತ್ ಕುಮಾರ್,ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಅ೦ಗಡಿ ಮಾಲಿಕರ ಘಟಕದ ಅಧ್ಯಕ್ಷ ಯಶೋಧರ ಭ೦ಡಾರಿ ಹಾಗೂ ರೇಶ್ಮ ಹೆಗ್ಡೆ ಮಣಿಪಾಲ ಉಪಸ್ಥಿತರಿದ್ದರು.

No Comments

Leave A Comment