Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಮೊದಲ ಬಾರಿಗೆ ‘ಸುಪ್ರೀಂ’ ನ್ಯಾಯಮೂರ್ತಿಗಳಿಂದ ಸುದ್ದಿಗೋಷ್ಠಿ: ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಸಮಾಧಾನ

ಹೊಸದಿಲ್ಲಿ: ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯ ಕುರಿತು ಅನುಮಾನ ವ್ಯಕ್ತವಾಗುತ್ತಿರುವ ಹೊತ್ತಲ್ಲೇ, ಇತಿಹಾಸದಲ್ಲೇ ಮೊದಲ ಬಾರಿ ಎಂಬಂತೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಗುರುವಾರ ಸುದ್ದಿಗೋಷ್ಠಿ ನಡೆಸಿ  ಮುಖ್ಯ ನ್ಯಾಯಮೂರ್ತಿ ವಿರುದ್ಧ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.

ನ್ಯಾಯಮೂರ್ತಿಗಳಾದ ಜಸ್ಟಿಸ್‌ ಮದನ್‌ ಲೋಕುರ್‌, ಜಸ್ಟಿಸ್‌ ಚಲ್ಮೇಶ್ವರ್‌ , ಜಸ್ಟಿಸ್‌ ಕುರಿಯನ್‌ ಜೋಸೆಫ್ ಮತ್ತು ರಂಜನ್‌ ಗೊಗೋಯ್‌ ಸುದ್ದಿಗೋಷ್ಠಿ ನಡೆಸಿ ಕೋರ್ಟ್‌ ವಿದ್ಯಮಾನಗಳ ಕುರಿತು ತಮಗಿರುವ ಅಸಮಧಾನವನ್ನು ಹೊರಹಾಕಿದರು.

‘ಕೆಲವು ಬಾರಿ ಸುಪ್ರೀಂ ಕೋರ್ಟ್‌ನಲ್ಲಿ ಬಯಸದ ಘಟನೆಗಳು ನಡೆಯುತ್ತಿವೆ. ಕೋರ್ಟ್‌ ಬೆಳವಣಿಗೆಗಳು ಸರಿಯಿಲ್ಲ. ಅಂತಹ ಘಟನೆಗಳ ಬಗ್ಗೆ ಸಿಜೆಐ ಅವರಿಗೆ ಪತ್ರ ಬರೆದು ತಿಳಿಸಿದ್ದೇವೆ. ಆದರೆ  ಫ‌ಲ ಸಿಗಲಿಲ್ಲ ಹೀಗಾಗಿ ಅನಿವಾರ್ಯವಾಗಿ ನಾವು ದೇಶದ ಜನರ ಮುಂದೆ ಬಂದಿದ್ದೇವೆ’ ಎಂದಿದ್ದಾರೆ.

ಪ್ರಜಾಪ್ರಭುತ್ವ  ಸುಪ್ರೀಂ ಕೋರ್ಟ್‌ನ ಘಟನೆ ಎತ್ತಿಹಿಡಿಯುವ ಯತ್ನ ಮಾಡುತ್ತಿದ್ದೇವೆ ಎಂದರು.

ಅಟಾರ್ನಿ ಜನರಲ್‌ ಭೇಟಿಯಾದ ಸಿಜೆಐ  

ನ್ಯಾಯಮೂರ್ತಿಗಳಸುದ್ದಿಗೋಷ್ಠಿ ಬೆನ್ನಲ್ಲೇ ಸಿಜೆಐ ಜಸ್ಟಿಸ್‌ ದೀಪಕ್‌ ಮಿಶ್ರಾ ಅವರು ಅಟಾರ್ನಿ ಜನರಲ್‌  ಕೆ.ಕೆ.ವೇಣುಗೋಪಾಲ್‌ ಅವರನ್ನು ತುರ್ತಾಗಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

View image on Twitter
No Comments

Leave A Comment