Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಇಸ್ರೋ ಮತ್ತೊಂದು ಮೈಲಿಗಲ್ಲು: ಕಾರ್ಟೋಸ್ಯಾಟ್-2 ಸೇರಿದಂತೆ 31 ಉಪಗ್ರಹಗಳ ಉಡಾವಣೆ ಯಶಸ್ವಿ/ISRO chief: ‘We want 60 launches in 5 years’

ನವದೆಹಲಿ: ಐತಿಹಾಸಿಕ ದಾಖಲೆಗಳ ಮೂಲದ ಇಡೀ ವಿಶ್ವದ ಗಮನ ಸೆಳೆಯುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಶುಕ್ರವಾರ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗಿದ್ದು, ವಾತಾವರಣದ ಮೇಲೆ ನಿಗಾವಹಿಸುವ ಕಾರ್ಟೋಸ್ಯಾಟ್-2 ಉಪಗ್ರಹ ಸೇರಿದಂತೆ ಇತರ 31 ಉಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಕಾರ್ಟೋಸ್ಯಾಟ್-2 ಇಸ್ರೋದ 100ನೇ ಉಪಗ್ರಹವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡಾವಣಾ ನೆಲೆಯಿಂದ ಉಪಗ್ರಹಗಳನ್ನು ಹೊತ್ತು ಪಿಎಸ್ಎಲ್’ವಿ-ಸಿ40 ರಾಕೆಟ್ ನಭಕ್ಕೆ ಹಾರಿದೆ.
ಇಂದು ಬೆಳಿಗ್ಗೆ 5.29ರಿಂದ ಉಪಗ್ರಹ ಉಡಾವಣೆ ಕಾರ್ಯ ಆರಂಭಗೊಂಡು, 9.29ಕ್ಕೆ ಸರಿಯಾಗಿ ಕಾರ್ಟೋಸ್ಯಾಟ್-2 ಸರಣಿಯ ಉಪ್ರಗ್ರಹವನ್ನು ಇಸ್ರೋ ಕಕ್ಷೆಗೆ ಹಾರಿಬಿಟ್ಟಿದೆ.
ಇಸ್ರೋ ಉಡಾವಣೆ ಮಾಡಿರುವ ಉಪಗ್ರಹಗಳಲ್ಲಿ ಭಾರತದ 3, ಕೆನಡಾ, ಫಿನ್’ಲ್ಯಾಂಡ್, ಫ್ರಾನ್ಸ್, ಕೊರಿಯಾ, ಬ್ರಿಟನ್, ಅಮೆರಿಕದ ಒಟ್ಟು 28 ಉಪಗ್ರಹಗಳು ಸೇರಿವೆ.
ಕಳೆದ ಬಾರಿ ಉಪಗ್ರಹ ಉಡಾವಣೆ ವೇಳೆ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ಇಂದು ಮತ್ತೆ ಉಪಗ್ರಹಮವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು. ದೇಶಕ್ಕೆ ಹೊಸ ವರ್ಷದ ಉಡುಗೊರೆ ನೀಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್ ಕಿರಣ್ ಕುಮಾರ್ ಅವರು ಹೇಳಿದ್ದಾರೆ.  

ಆ.31ರಂದು ಪಿಎಸ್ಎಲ್’ವಿ ರಾಕೆಟ್ ಮೂಲಕ ಇಸ್ರೋ ನಡೆಸಿದ್ದ ಉಡಾವಣೆ ವಿಫಲಗೊಂಡಿತ್ತು. ಆ ಬಳಿಕ ಇದೀಗ ಮತ್ತೆ ಪಿಎಸ್ಎಲ್’ವಿ ಸರಣಿ ರಾಕೆಟ್ ನಲ್ಲಿಯೇ ಉಡಾವಣೆಗೆ ಮುಂದಾಗಿದ್ದರಿಂದಾಗಿ ಇದು ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಕಕ್ಷೆ ಸೇರಲಿರುವ ಉಪಗ್ರಹ ಕಾರ್ಟೋಸ್ಯಾಟ್2ಎಸ್; ಕಾರ್ಟೋಸ್ಯಾಟ್2ಎಸ್ ಇದೀಗ ಉಡಾವಣೆಯಾದ ಉಪಗ್ರಹವಾಗಿದೆ. ಈ ಸರಣಿಯಲ್ಲಿ ಉಡಾವಣೆಯಾಗುತ್ತಿರುವ ಏಲನೇ ಉಪಗ್ರಹ ಇದಾಗಿದೆ.

ಪ್ರಸ್ತುತ ಉಡಾವಣೆಗೊಂಡು ಬಾಹ್ಯಾಕಾಶ ಸೇರಿರುವ ಉಪಗ್ರಹಳು ಭಾರತದ ವಿವಿಧ ಕ್ಷೇತ್ರಗಳ ಸಂವಹನಕ್ಕೆ ದೊಡ್ಡ ಶಕ್ತಿಯನ್ನು ನೀಡಲಿದೆ. ಹೆಚ್ಚು ಗುಣಮಟ್ಟದ ಫೋಟೋಗಳ ರವಾನೆ, ಶರವೇಗದ ಮಾಹಿತಿ ವಿನಿಮಯ, ಕಾಟೋಗ್ರಾಫಿಕ್ಸ್ ಅಪ್ಲಿಕೇಷನ್ಸ್, ಅರ್ಬನ್ ಮತ್ತು ರೂರಲ್ ಅಪ್ಲಿಕೇಷನ್ಸ್, ಕರಾವಳಿ ಭೂ ಬಳಕೆ ಹಾಗೂ ನಿಯಂತ್ರಣ, ನೀರು ಬಳಕೆ ರಸ್ತೆ ಸಂಪರ್ಕ ನಿಯಂತ್ರಣ ಹೀಗೆ ನಾನಾ ರೀತಿಯ ಅಧ್ಯಯನಕ್ಕೆ ಇದು ಸಹಕಾರಿಯಾಗಲಿದೆ.

No Comments

Leave A Comment