Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಇಂದು ಮಲ್ಹೋತ್ರಾ ಹೆಸರು ಸೂಚಿಸಿದ ಕೊಲಿಜಿಯಂ

ನವದೆಹಲಿ: ಹಿರಿಯ ವಕೀಲರಾದ ಇಂದು ಮಲ್ಹೋತ್ರಾ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹುದ್ದೆಗಾಗಿ ಕೊಲಿಜಿಯಂ ಶಿಫಾರಸ್ ಮಾಡಿದ್ದು ಈ ಮೂಲಕ ಉನ್ನತ ಹುದ್ದೆಗೆ ನೇರವಾಗಿ ನೇಮಕವಾಗುತ್ತಿರುವ ಪ್ರಥಮ ಮಹಿಳೆ ಎನ್ನುವ ಕೀರ್ತಿಗೆ ಇಂದು ಪಾತ್ರರಾಗಿದ್ದಾರೆ.

ನ್ಯಾಯವಾದಿಗಳ ಕುಟುಂಬದಿಂಡಲೇ ಬಂದಿರುವ ಇಂದು ಮಲ್ಹೋತ್ರಾ ಅವರ ತಂದೆ ಒ.ಪಿ. ಮಲ್ಹೋತ್ರಾ ಸಹ ಹಿರಿಯ ನ್ಯಾಯವಾದಿಗಳಾಗಿದ್ದು ಅವರ ಹಿರಿಯ ಸೋದರ ಹಾಗೂ ಸೋದರಿ ಸಹ ವಕೀಲರಾಗಿದ್ದಾರೆ.

ಸ್ವಾತಂತ್ರ್ಯಾನಂತರ  ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೇರಲಿರುವ ಏಳನೇ ಮಹಿಳೆ ಇಂದು ಅವರಾಗಲಿದ್ದು ಉಳಿದ ಆರು ಮಂದಿ ಹೈ ಕೋರ್ಟ್ ನಿಂದ ಭಡ್ತಿ ಪಡೆದವರಾಗಿದ್ದಾರೆ. ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಿರುವ ಏಕೈಕ ಮಹಿಳೆ  ಆರ್‌. ಭಾನುಮತಿ ಅವರಾಗಿದ್ದು 2007ರಲ್ಲಿ  ಇವರನ್ನು ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರನ್ನಾಗಿ ನೇಮಕ ಮಾಡಲಾಗಿತ್ತು.

ಇನ್ನು ಇದೇ ವೇಳೆ ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಹೆಸರನ್ನೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ ಮಾಡಲಾಗಿದ್ದು 2016ರಲ್ಲಿ  ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಆದೇಶ ರದ್ದುಪಡಿಸಿದ್ದ ನ್ಯಾಯಪೀಠದಲ್ಲಿ ಜೋಸೆಫ್‌ ಅವರಿದ್ದರು.

No Comments

Leave A Comment