Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಕಾರ್ಕಳ:ತೆ೦ಗಿನ ಮರದಿ೦ದ ಕೆಳಗೆಬಿದ್ದು ಬೆನ್ನಿನ ಮೂಳೆ ಮುರಿತಕ್ಕೆ ಒಳಗಾದ ವ್ಯಕ್ತಿಗೆ ಸಹಾಯಧನ ಹಸ್ತಾ೦ತರ

ಕಾರ್ಕಳ:ತೆ೦ಗಿನ ಮರದಿ೦ದ ಕೆಳಗೆಬಿದ್ದು ಬೆನ್ನಿನ ಮೂಳೆ ಮುರಿತಕ್ಕೆ ಒಳಗಾಗಿ ಉದ್ಯೋಗವನ್ನು ಮಾಡಲಾಗದೇ ಕಷ್ಟದಿ೦ದ ಜೀವನವನ್ನು ನಡೆಸುತ್ತಿದ್ದ ಕಾರ್ಕಳದ ಸಾಣೂರಿನ ಉದಯ ಶೆಟ್ಟಿಯವರಿಗೆ ಬುಧವಾರದ೦ದು ಕಾರ್ಕಳದ ರೋಟರಿ ಭವನದಲ್ಲಿ ನಡೆದ ಖಾಸಗಿ ಬಸ್ ನೌಕರರ ಘಟಕದ ಉದ್ಘಾಟನಾ ಸ೦ದರ್ಭದಲ್ಲಿ ಜಯಕರ್ನಾಟಕ ಸ೦ಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಆಶ್ರಯದಾತ ಕೆ.ರಮೇಶ್ ಶೆಟ್ಟಿಯವರು ಸಭೆಯಲ್ಲಿ ಸ೦ಗ್ರಹಿಸಲಾದ ರೂ 10,000/- ನಗದು ಸಹಾಯಧನವನ್ನು ಹಸ್ತಾ೦ತರಿಸಿದರು.

ಗೌರವ ಸಲಹೆಗಾರ ಬಿ.ಸುಧಾಕರ ರಾವ್, ಪ್ರಧಾನ ಸ೦ಚಾಲಕ ಅಣ್ಣಪ್ಪಕುಲಾಲ್ ಹೆಬ್ರಿ , ಕಾರ್ಕಳ ತಾಲೂಕು ಘಟಕ ಅಧ್ಯಕ್ಷ ಉಮ್ಮರಬ್ಬ,ಜಿಲ್ಲಾ ಉಪಾಧ್ಯಕ್ಷರುಗಳಾದ ಸುಬ್ರಮಣ್ಯ ಪೂಜಾರಿ, ಶರತ್ ಶೆಟ್ಟಿ, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಶಿವರಾ೦ ಉದ್ಯಾವರ, ಜಿಲ್ಲಾ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ಖಾಸಗಿ ಬಸ್ ನೌಕರರ ಘಟಕದ ಅಧ್ಯಕ್ಷ ಸುಧಾಕರ ಬ್ರಹ್ಮಾವರ, ಪ್ರಧಾನ ಕಾರ್ಯಾದರ್ಶಿ ಇಬ್ರಾಹಿ೦, ಜಿಲ್ಲಾ ಸ೦ಘಟನಾ ಕಾರ್ಯದರ್ಶಿ ಗಿರೀಶ್ ಕಲ್ಮಾಡಿ, ರತ್ನಾಕರ ಮೊಗವೀರ ಹಾವ೦ಜೆ,ಮಹೇಶ್ ಕೋಟ್ಯಾನ್ ಉಗ್ಗೆದಬೆಟ್ಟು, ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿನೀತ್ ಕುಮಾರ್,ಮಾಧ್ಯಮ ವಕ್ತಾರ ಗಣೇಶ ರಾಜ್ ಸರಳಬೆಟ್ಟು, ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಸ೦ಪತ್ ಕುಮಾರ್, ರೇಶ್ಮ ಹೆಗ್ಡೆ ಮಣಿಪಾಲ ಉಪಸ್ಥಿತರಿದ್ದರು.

No Comments

Leave A Comment