Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ನಾನು ಸಿಎಂ ಆದ್ಮೇಲೆ ನಿಮ್ಮ ಪರಿಸ್ಥಿತಿ ನೆಟ್ಟಗಿರುವುದಿಲ್ಲ ..!

ತುಮಕೂರು:  ಕಾಂಗ್ರೆಸ್‌ನ ಕೈಗೊಂಬೆಯಂತೆ ವರ್ತಿಸಿ , ನಮ್ಮ ಕಾರ್ಯಕರ್ತರ ಮೇಲೆ ಕಾನೂನು ಬಾಹಿರವಾಗಿ ಕಿರುಕುಳ ನೀಡಿ  ರೌಡಿ ಶೀಟರ್‌ ಪ್ರಕರಣ ದಾಖಲಿಸಿ ಭಯದ ವಾತಾವರಣ ಸೃಷ್ಟಿಸಬೇಡಿ. ಮೂರು ನಾಲ್ಕು ತಿಂಗಳು ಕಳೆದ ಮೇಲೆ ನಾನು ಮುಖ್ಯಮಂತ್ರಿಯಾಗಿ ಇಲ್ಲಿ ನಿಂತಾಗ ನಿಮ್ಮ ಪರಿಸ್ಥಿತಿ ನೆಟ್ಟಗಾಗಲಿಕ್ಕಿಲ್ಲ..ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಪೊಲೀಸ್‌ ಅಧಿಕಾರಿಗಳಿಗೆ ನೀಡಿದ ಎಚ್ಚರಿಕೆ.

ಗುರುವಾರ ಶಿರಾದಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಯಡಿಯೂರಪ್ಪ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿ ಕಾರುವ ವೇಳೆ ಪೊಲೀಸರ ವಿರುದ್ಧವೂ ಗುಡುಗಿದರು.

ಸಿಎಂ ಸಿದ್ದರಾಮಯ್ಯ ಮತ್ತು ಶಿರಾ ಶಾಸಕ,ಕಾನೂನು ಸಚಿವ ಟಿ.ಬಿ..ಜಯಚಂದ್ರ ವಿರುದ್ಧವೂ ತೀವ್ರ ವಾಗ್ಧಾಳಿ ನಡೆಸಿದರು.

‘ಕಾನೂನು ಸಚಿವರ ತವರಿನಲ್ಲೇ ಭಾರೀ ಅಕ್ರಮಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.

Read more at https://www.udayavani.com/kannada/news/state-news/264165/bsy-warns-police-officers#o18UcRL9QpbVGiEA.99

No Comments

Leave A Comment