Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಜ.11ರಿ೦ದ 14ರವರೆಗೆ ಉಡುಪಿಯಲ್ಲಿ ಪವರ್ ಪರ್ಬ’18

ಉಡುಪಿ:ಪವರ್ ಪ್ಲ್ಯಾಟ್‍ಫಾರಂ ಆಫ್ ವ್ಯೂಮೆನ್ ಎಂಟರ್‍ಪ್ರೆನ್ಯೂರ್ಸ್ ರಿಜಿಸ್ಟರ್ಡ್ ಲಾಭದ ಉದ್ದೇಶವಿಲ್ಲದ ಈ ಸಂಸ್ಥೆ ಗೃಹೋದ್ಯೋಗ ಹಾಗೂ ಕುಟುಂಬ ಉದ್ಯಮಗಳಲ್ಲಿ ತೊಡಗಿರುವ ಮಹತ್ವಾಕಾಂಕ್ಷಿ ಮಹಿಳಾ ಉದ್ಯಮಿಗಳು ಸದಸ್ಯರಾಗಿರುವ ಸಂಸ್ಥೆಯಾಗಿರುತ್ತದೆ. ಮಹಿಳಾ ಉದ್ಯಮಿಗಳಿಗೆ ಪರಸ್ಪರ ಹಾಗೂ ಸಾಮೂಹಿಕ ಕಲಿಕೆ ಮತ್ತು ಗಳಿಕೆಗೆ ವೇದಿಕೆ ಕಲ್ಪಿಸಿಕೊಡುವುದೇ ಮುಖ್ಯ ಉದ್ದೇಶವಾಗಿದೆ. ಎಲ್ಲಾ ವಿಭಾಗದ ಮಹಿಳಾ ಉದ್ಯಮಿಗಳನ್ನು ಒಗ್ಗೂಡಿಸಿ ಅವರವರ ಕೌಶಲ್ಯ ಸಾಮಥ್ರ್ಯವನ್ನು ಪೋಷಿಸಿ ಅವರ ಕನಸುಗಳನ್ನು ನನಸಾಗಿಸುವುದು ಸಂಸ್ಥೆಯ ಉದ್ದೇಶ.

ಪವರ್ ಸಂಸ್ಥೆಯು 2016 ರಲ್ಲಿ “ಪವರ್ ಪರ್ಬಾ”ದ ಮೊದಲನೆಯ ಆವೃತ್ತಿಯನ್ನು ಅತ್ಯಂತ ಯಶಸ್ವಿಯಾಗಿ ಉಡುಪಿಯಲ್ಲಿ ಸಂಯೋಜಿಸಿದ್ದರ ಫಲಿತಾಂಶವಾಗಿ ತನ್ನ 2ನೇ ಆವೃತ್ತಿಗೆ ಸುಸಜ್ಜಿತವಾಗಿ ತಯಾರಾಗಿದೆ.

“ಪವರ್ ಪರ್ಬಾ”: ತುಳು ಭಾಷೆಯಲ್ಲಿ ಪರ್ಬಾ ಎಂದರೆ ಹಬ್ಬ ಎಂದರ್ಥ. ಮಹಿಳಾ ಉದ್ಯಮಶೀಲತೆಯ ಆಚರಣೆಯೇ ಪವರ್ ಪರ್ಬಾ ಎಂಬ ಹಬ್ಬದ ಸಂಕೇತವಾಗಿದೆ. ಉಡುಪಿ ಜಿಲ್ಲೆಯ ಗ್ರಾಮ ಮತ್ತು ನಗರ ಪ್ರದೇಶಗಳ ಮಹಿಳಾ ಉದ್ಯಮಿಗಳು ತಯಾರಿಕೆಯ ವಸ್ತುಗಳು, ಅವರ ಸಂಸ್ಥೆಯ ಸೇವೆ, ಕೌಶಲ್ಯ, ಪಾಂಡಿತ್ಯವನ್ನು ಗ್ರಾಹಕರೆದುರು ಪ್ರದರ್ಶನ ನೀಡಿ ಗ್ರಾಹಕರನ್ನು ಒಗ್ಗೂಡಿಸುವುದೇ ‘ಪರ್ಬಾ’ ಇದು ಪವರ್ ಪರಿಕಲ್ಪನೆ. ಮಹಿಳಾ ಉದ್ಯಮಿಗಳನ್ನು ಆರ್ಥಿಕವಾಗಿ ಬಲಪಡಿಸುವುದೇ ಪವರ್ ತಂಡದ ಗುರಿ.

“ಪವರ್ ಪರ್ಬಾ’18”ರ ಮುಖ್ಯ ಉದ್ದೇಶಗಳು ಇಂತಿವೆ:
1. ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆಯನ್ನು ಸೂಕ್ತ ಪ್ರಚಾರದೊಂದಿಗೆ ಕಲ್ಪಿಸುವುದು.
2. ಗ್ರಾಮ ಹಾಗೂ ನಗರ ಪ್ರದೇಶಗಳ ಮಹಿಳಾ ಉದ್ಯಮಿಗಳನ್ನು ಒಂದೇ ಸೂರಿನಡಿಯಲ್ಲಿ ಒಗ್ಗೂಡಿಸುವುದು.
3. ಗ್ರಾಮ ಮತ್ತು ನಗರ ಪ್ರದೇಶಗಳ ಮಹಿಳಾ ಉದ್ಯಮಿಗಳ ನಡುವೆ ಪರಸ್ಪರ ವ್ಯವಹಾರಿಕ ಬಾಂಧವ್ಯವನ್ನು ಕಲ್ಪಿಸುವುದು.
4. ಈ ಮಹಿಳಾ ಉದ್ಯಮಿಗಳ ಕೌಶಲ್ಯವನ್ನು ಗ್ರಾಹಕರಿಗೆ ಪರಿಚಯಿಸುವುದು.
5. ಉದ್ಯಮಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆ, ನಿರ್ವಹಣೆ ಹಾಗೂ ತಾಂತ್ರಿಕ ಜ್ಞಾನವನ್ನು ನೀಡುವುದು.
6. ಗ್ರಾಹಕರ ಸಂಪರ್ಕ ಬೆಳೆಸುವ ಮೂಲಕ ಉದ್ಯಮ ಅಭಿವೃದ್ಧಿಪಡಿಸಿಕೊಳ್ಳುವಲ್ಲಿ ಸಹಕಾರ ನೀಡುವುದು.

ಈ ಬಾರಿಯ “ಪವರ್ ಪರ್ಬಾ”ವನ್ನು ಜನವರಿ 11, 2018 ಪ್ರಾರಂಭಗೊಂಡು 14ನೇ ತಾರೀಕಿನವರೆಗೆ ಉಡುಪಿಯ ಮಹಾತ್ಮಗಾಂಧಿ ಬಯಲು ರಂಗಮಂದಿರ ಬೀಡಿನಗುಡ್ಡೆಯಲ್ಲಿ ನಡೆಯಲಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಳಿಗೆಗಳು ಸೇರಿ ಈಗಾಗಲೇ ಒಟ್ಟು 170 ಮಳಿಗೆಗಳನ್ನು ಮಹಿಳಾ ಉದ್ಯಮಿಗಳು ಕಾಯ್ದಿರಿಸಿದ್ದು ಉಡುಪಿಯ ನೆರೆಹೊರೆಯ ನಗರಗಳಲ್ಲದೇ ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಗದಗ ಹಾಗೂ ಮುಂಬಯಿ, ತಮಿಳುನಾಡು, ರಾಜಸ್ಥಾನಗಳಿಂದ ಕರಕುಶಲ, ಆಭರಣ, ಗೃಹಾಲಂಕಾರ, ಸಿದ್ಧಉಡುಪು, ವಸ್ತ್ರ ವಿನ್ಯಾಸ, ಚಿತ್ರಕಲೆ, ಮೊದಲಾದ ವೈವಿಧ್ಯಮಯ ಮಳಿಗೆಗಳನ್ನು ಪವರ್ ಪರ್ಬಾ’18 ಒಳಗೊಂಡಿದೆ. ಈ ಮಳಿಗೆಗಳಲ್ಲಿ ಡಿಜಿಟಲ್ ಪೇಮೆಂಟ್ ಸೌಕರ್ಯ ಸೇರಿದಂತೆ ಪ್ರದರ್ಶನ ಮತ್ತು ಮಾರಾಟಕ್ಕೆ ಬೇಕಾದ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು ಸ್ಥಳದಲ್ಲಿ ವಾಹನ ನಿಲುಗಡೆ ಮತ್ತಿತರ ಮೂಲಭೂತ ಸೌಕರ್ಯಗಳು ವ್ಯವಸ್ಥೆ ಮಾಡಲಾಗಿದೆ.

ಪೂರ್ವಭಾವಿ ಪ್ರಚಾರದ ಅಂಗವಾಗಿ ಜನವರಿ 10 ರಂದು ಸಂಜೆ 4:30ಕ್ಕೆ ‘ಪವರ್’ ಸದಸ್ಯರು ಹಾಗೂ ಮಳಿಗೆಗಳ ಮಹಿಳಾ ಉದ್ಯಮಿಗಳಿಂದ ಕಾರ್ ಮತ್ತು ಬೈಕ್ ಜಾಥ ಯನ್ನು ಮಣಿಪಾಲದ ರಜತಾದ್ರಿಯಿಂದ ಉಡುಪಿಗೆ ಮತ್ತು ಉಡುಪಿಯಿಂದ ಮರಳಿ ರಜತಾದ್ರಿಯವರೆಗೆ ಹಮ್ಮಿಕೊಳ್ಳಲಾಗಿದ್ದು ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಸಿರು ನಿಶಾನೆ ನೀಡಲಿದ್ದಾರೆ೦ದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರು ಮತ್ತು ಸಂಘಟನಾ ಅಧ್ಯಕ್ಷರಾದ ಡಾ| ಗಾಯತ್ರಿರವರು ತಿಳಿಸಿದ್ದಾರೆ.

ಉದ್ಘಾಟನೆ: ಜನವರಿ 11 ರಂದು ಪವರ್‍ಪರ್ಬಾ’18ರ ಉದ್ಘಾಟನೆಯನ್ನು ಶ್ರೀ ಪ್ರಮೋದ್ ಮಧ್ವರಾಜ್, ಮಾನ್ಯ ಮಂತ್ರಿಗಳು, ಯುವ ಜನಸೇವೆ ಮತ್ತು ಮೀನುಗಾರಿಕೆ, ಕರ್ನಾಟಕ ಸರಕಾರ ಇವರು ನೆರವೇರಿಸಲಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಇವರು ಮಾರಾಟ ಮೇಳವನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಶ್ರೀ ಎ.ಸಿ. ಸಾಹು, ವ್ಯವಸ್ಥಾಪಕರು ಮತ್ತು ಪ್ರಾದೇಶಿಕ ಮುಖ್ಯಸ್ಥರು, ಸಿಡ್‍ಬಿ, ಬೆಂಗಳೂರು; ಶ್ರೀ ರಮಾನಂದ ನಾಯಕ್, ಸಹ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಉಡುಪಿ; ಶ್ರೀ ಕಿಶೋರ್ ಆಳ್ವ, ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಸಹ ಅಧ್ಯಕ್ಷರು, ಅದಾನಿ ಯು.ಪಿ.ಸಿ.ಎಲ್., ಉಡುಪಿ; ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ, ಅಧ್ಯಕ್ಷರು, ಉಡುಪಿ ನಗರಸಭೆ; ಡಾ| ಎ.ಪಿ. ಆಚಾರ್, ಮುಖ್ಯಸ್ಥರು, ಕಾಪೆರ್Çರೇಟ್ ಪೆÇ್ರೀಗ್ರಾಂಸ್, ನಿಟ್ಟೆ ವಿಶ್ವವಿದ್ಯಾಲಯ ಇವರುಗಳು ಭಾಗವಹಿಸಲಿದ್ದಾರೆ.

ಸನ್ಮಾನ: ಕಳೆದ 13 ವರುಷಗಳಿಂದ ಪುತ್ತೂರು ಮತ್ತು ನಿಟ್ಟೂರಿನ ಪರಿಸರದಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಯಲ್ಲಿ ತನ್ನೊಂದಿಗೆ ಇತರರನ್ನೂ ತೊಡಗಿಸಿಕೊಳ್ಳುತ್ತಿರುವ ಪುತ್ತೂರಿನ ಶ್ರೀಮತಿ ಸುಂದರಿ ಭಾರ್ಗವ್ ಇವರನ್ನು ಸನ್ಮಾನಿಸಲಿದ್ದೇವೆ.

ಸಮಾರೋಪ: ಜನವರಿ 13 ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭವು ಡಾ| ವೀಣಾ ಬನ್ನಂಜೆಯವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು; ಶ್ರೀ ಲಕ್ಷ್ಮಣ ನಿಂಬರಗಿ ಉಡುಪಿ ಜಿಲ್ಲಾ ಸುಪರ್‍ಇಂಟೆಂಡೆಂಟ್ ಆಫ್ ಪೆÇೀಲಿಸ್ ಇವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಚಲನಚಿತ್ರ ನಟಿ ಮತ್ತು ಕಿರುತೆರೆ ನಟಿ ಕು| ಯಜ್ಞಾ ಶೆಟ್ಟಿ, ಶ್ರೀ ಅಂಡಾರು ದೇವಿಪ್ರಸಾದ್ ಶೆಟ್ಟಿ, ಮ್ಯಾನೇಜಿಂಗ್ ಕಮಿಟಿ ಮೆಂಬರ್, ಎಫ್.ಕೆ.ಸಿ.ಸಿ.ಐ, ಬೆಂಗಳೂರು; ಶ್ರೀ ಮಂಜುನಾಥಯ್ಯ, ಪೌರಾಯುಕ್ತರು, ಉಡುಪಿ ನಗರಸಭೆ ಮತ್ತು ಶ್ರೀ ಸತೀಶ್ ಕಾಮತ್, ಜನರಲ್ ಮ್ಯಾನೇಜರ್, ಸಿಂಡಿಕೇಟ್ ಬ್ಯಾಂಕ್ ಇವರುಗಳು ಭಾಗವಹಿಸುತ್ತಿದ್ದಾರೆ.

ಮನೋರಂಜನೆ: ಜನವರಿ 11 ರಂದು ಎಕ್ಸ್‍ಟ್ರೀಂ ಬ್ಲಾಸ್ಟ್ ಮಂಜೀತ್ ಮತ್ತು ವಸಂತ್ ಡ್ಯಾನ್ಸ್ ಗ್ರೂಪ್‍ದಿಂದ ಬಾಲಿವುಡ್ ಡಾನ್ಸ್,
ಜನವರಿ 12 ನಾಟ್ಯಕಲಾಸಂಘದಿಂದ ನಾಟ್ಯ-ಗಾನ-ವೈಭವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಲ್ಲಿ ಮತ್ತು ಚಿಕ್ಕ ಮಕ್ಕಳಿಂದ ಫ್ಯಾಶನ್ ಶೋ ಹಾಗೂ ಜುಂಬಾ ಡಾನ್ಸ್ ಹಾಗೂ ಜನವರಿ 13 ರಂದು ಉಡುಪಿ ಸೃಷ್ಟಿ ಫೌಂಡೇಶನ್‍ನ ಡಾ|ಮಂಜರಿಯವರಿಂದ ನೃತ್ಯವೈವಿಧ್ಯ ನಡೆಯಲಿದೆ.

ಸಮಾಜ ಸೇವೆ: ಮಾರಾಟ ಮೇಳದ ಅವಧಿಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಮಾಹಿತಿಯನ್ನು ಆದರ್ಶ ಆಸ್ಪತ್ರೆ, ಉಡುಪಿ, ಉಚಿತ ನೇತ್ರ ತಪಾಸಣಾ ಶಿಬಿರವನ್ನು ಪ್ರಸಾದ ನೇತ್ರಾಲಯ, ದಂತ ತಪಾಸಣಾ ಶಿಬಿರವನ್ನು ಐ.ಡಿ.ಎ., ಉಡುಪಿ ಮತ್ತು ನರರೋಗ ತಪಾಸಣಾ ಶಿಬಿರವನ್ನು ನ್ಯಾಶನಲ್ ನ್ಯೂರೋ ಸೈನ್ಸ್‍ಸ್, ಇಂಡಿಯಾ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದೆ.

ಸ್ವಚ್ಛ ಭಾರತ: ಸ್ವಚ್ಛತೆ ಮತ್ತು ಪರಿಸರ ಕಾಳಜಿ, ತ್ಯಾಜ್ಯದ ನಿರ್ವಹಣೆ, ಮರುಬಳಕೆಯ ಜಾಗೃತಿ ಮೂಡಿಸಲು 8 ರಿಂದ 14ರ ವಯೋಮಾನದ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಜನವರಿ 13 ರಂದು ಆಯೋಜಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಪುಷ್ಪಾ ಜಿ. ರಾವ್, ಸಂಘಟನಾ ಕಾರ್ಯದರ್ಶಿ,ಶ್ರೀಮತಿ ರೇಣು ಜಯರಾಮ್, ಸಲಹೆಗಾರರು ಮತ್ತು ಸ್ಥಾಪಕ ಅಧ್ಯಕ್ಷರು,ಶ್ರೀಮತಿ ರಶ್ಮಿ ವಿಜಯೇಂದ್ರ, ಜೊತೆ ಕಾರ್ಯದರ್ಶಿ,ಶ್ರೀಮತಿ ಸರಿತಾ ಸಂತೋಷ್, ಚೇರ್‍ಮನ್, ಪ್ರಿ ಇವೆಂಟ್,ಶ್ರೀಮತಿ ಸುಗುಣಾ ಸುವರ್ಣ, ಕೋಶಾಧಿಕಾರಿ,ಶ್ರೀಮತಿ ಸ್ಮಿತಾ ರಜನೀಶ್, ಕಾರ್ಯದರ್ಶಿ, ಶ್ರೀಮತಿ ತಾರಾ ತಿಮ್ಮಯ್ಯ, ಉಪಾಧ್ಯಕ್ಷರು, ಶ್ರೀಮತಿ ಜಯಶ್ರೀ ಭಂಡಾರಿ,ಶ್ರೀಮತಿ ಸೋನಾ ಜೆ.ಪಿ.,ಶ್ರೀಮತಿ ಚೇತನಾ ಟ್ರೆಹಾನ್,ಶ್ರೀಮತಿ ಜಯಶ್ರೀ ಕೃಷ್ಣರಾಜ್ ರವರು ಉಪಸ್ಥಿತರಿದ್ದರು.

No Comments

Leave A Comment