Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಮತ್ತೊಂದು ರಾಜಾಕಾಲುವೆ ದುರಂತ; 3ವರ್ಷದ ಮಗು ಬಲಿ

ಬೆಂಗಳೂರು: ಆಟವಾಡುತ್ತಿದ್ದ 3ವರ್ಷದ ಮಗು ಕಾಲುಜಾರಿ ಬಿದ್ದು ರಾಜಾಕಾಲುವೆಯಲ್ಲಿ ಕೊಚ್ಚಿಕೊಂಡು ಹೋದ ಘಟನೆ ಮಂಗಳವಾರ ದೊಡ್ಡಬೊಮ್ಮಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಲಬುರಗಿಯಿಂದ ಗಾರೆ ಕೆಲಸ ಮಾಡಲು ಬಂದಿದ್ದ ದಂಪತಿ ರಾಜಾಕಾಲುವೆ ಬಳಿ ಟೆಂಟ್ ಹಾಕಿ ವಾಸ್ತವ್ಯ ಹೂಡಿದ್ದರು. 3 ವರ್ಷದ ಮಗು ತನುಶ್ರೀ ಆಟವಾಡುತ್ತಿದ್ದಾಗ ಕಾಲುಜಾರಿ ರಾಜಾಕಾಲುವೆಗೆ ಬಿದ್ದು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಮಳೆಗಾಲ ಹಾಗೂ ಇತರ ಸಂದರ್ಭದಲ್ಲಿಯೂ ರಾಜಾಕಾಲುವೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಬಿಬಿಎಂಪಿ ಸಮರ್ಪಕವಾಗಿ ತಂತಿಬೇಲಿ ಅಥವಾ ತಡೆಗೋಡೆ ನಿರ್ಮಿಸದಿರುವುದೇ ದುರಂತಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದರು.

No Comments

Leave A Comment