Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಮುಂಬಯಿ: ಶಿವಸೇನಾ ನಾಯಕ ಅಶೋಕ್‌ ಸಾವಂತ್‌ ಇರಿದು ಕೊಲೆ

ಮುಂಬಯಿ : ಮುಂಬಯಿಯ ಕಾಂದಿವಿಲಿಯಲ್ಲಿ ನಿನ್ನೆ ಭಾನುವಾರ ಶಿವಸೇನೆಯ ನಾಯಕ ಅಶೋಕ್‌ ಸಾವಂತ್‌ ಅವರನ್ನು ಹಂತಕರು ಇರಿದು ಕೊಂದಿರುವ ಘಟನೆ ನಡೆದಿದೆ.

ಸಾವಂತ್‌ ಅವರು ನಿನ್ನೆ ರಾತ್ರಿ 10.45ರ ಹೊತ್ತಿಗೆ ತನ್ನ ಸ್ನೇಹಿತರೋರ್ವರನ್ನು ಭೇಟಿಯಾಗಿ ಮನೆಗೆ ಮರಳುತ್ತಿದ್ದಾಗ ಅವರನ್ನು ಹಂತಕರು ಇರಿದು ಕೊಂದರು. ಮುಂಬಯಿಯ ಮಾಜಿ ಕಾರ್ಪೊರೇಟರ್‌ ಕೂಡ ಆಗಿರುವ ಸಾವಂತ್‌ ಅವರು ತಮ್ಮ ಮೇಲೆ ಮಾರಣಾಂತಿಕ ದಾಳಿ ನಡೆದಾಗ ತಮ್ಮ ಮನೆಯಿಂದ ಕೇವಲ 200 ಮೀಟರ್‌ ದೂರದಲ್ಲಿದ್ದರು.

ಸಮತಾ ನಗರದಲ್ಲಿನ ಸುರ್‌ ಕಟ್ಟಡದಲ್ಲಿನ ಸಾವಂತ್‌ ಅವರ ಮನೆಯ ಮುಂದೆ ವಾಹನವೊಂದರಲ್ಲಿ ಕಾಯುತ್ತಿದ್ದ ಹಂತಕರು ಸಾವಂತ್‌ ಅವರನ್ನು ಕಂಡಾಕ್ಷಣ ಅವರ ಬಳಿ ಸಾರಿ ಅತ್ಯಂತ ಆಕ್ರಮಣಕಾರಿ ರೀತಿಯಲ್ಲಿ ತಮ್ಮಲ್ಲಿನ ಹರಿತವಾ ಆಯುಧವನ್ನು ಝಳಪಿಸಿ ಸಾವಂತ್‌ ಅವರನ್ನು ಬಲವಾಗಿ ಇರಿದು ಸ್ಥಳದಿಂದ ಪರಾರಿಯಾದರು.

ರಕ್ತದ ಮಡುವಿನಲ್ಲಿ ಬಿದ್ದಿದ್ದ 62ರ ಹರೆಯದ ಸಾಂವತ್‌ ಅವರನ್ನು ಸ್ಥಳೀಯರು ಒಡನೆಯೇ ಆಸ್ಪತ್ರೆಗೆ ಒಯ್ದರು. ಆದರೆ ಅಲ್ಲಿನ ವೈದ್ಯರು ಸಾವಂತ್‌ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.

ಐಪಿಸಿ ಸೆ.302ರ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಕೊಲೆ ನಡೆದ ತಾಣದಲ್ಲಿನ ಸಿಸಿಟಿಟಿವಿಯಲ್ಲಿ ದಾಖಲಾದ ಚಿತ್ರಿಕೆಯನ್ನು ಪರಿಶೀಲಿಸುತ್ತಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ಹತ ಸಾವಂತ್‌ ಅವರು ಈಚೆಗೆ ಕೇಬಲ್‌ ಉದ್ಯಮವನ್ನು ಪ್ರವೇಶಿಸಿದ್ದರು. ಅವರಿಗೆ ಕೆಲವು ದಿನಗಳಿಂದ ಸುಲಿಗೆ ಕರೆಗಳು ಬರುತ್ತಿದ್ದವು.

ಸಾವಂತ್‌ ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

No Comments

Leave A Comment