Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಮಾಧವ ಕೃಪಾ ಶಾಲೆಯ ರಕ್ಷಕ-ಶಿಕ್ಷಕ ಸಂಘದಿಂದವಿಶೇಷ ಕ್ರೀಡಾಕೂಟ

ಮಣಿಪಾಲ:ಆಟೋಟ ಮತ್ತಿತರ ಕ್ರೀಡಾ ಚಟುವಟಿಕೆಗಳಿಂದ ದೇಹಕ್ಕೆ ಅವಶ್ಯವಾಗಿ ಬೇಕಾದ ವ್ಯಾಯಾಮ ದೊರೆತು ಉತ್ತಮ ಆರೋಗ್ಯವನ್ನೂ, ದೈಹಿಕ ಕ್ಷಮತೆ – ದೃಢತೆಯನ್ನು ಕಾಯ್ದುಕೊಳ್ಳಬಹುದು.  ಪ್ರತಿನಿತ್ಯಇಂತಹ ಒಂದಿಲ್ಲೊಂದು ಚಟುವಟಿಕೆಯಿಂದಿದ್ದಾಗ ಅವರು ತಮ್ಮ ಮಕ್ಕಳಿಗೂ ಪ್ರೇರಕರಾಗುತ್ತಾರೆ. ಇಂದಿನ ಮಕ್ಕಳಿಗಿದು ತೀರಾ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿಮಣಿಪಾಲದ ಮಾಧವ ಕೃಪಾ ಶಾಲೆಯ ರಕ್ಷಕ – ಶಿಕ್ಷಕ ಸಂಘವು ಎಲ್ಲಾ  ಮತ್ತು ಶಿಕ್ಷಕರಿಗಾಗಿಯೇ ವಿಶೇಷವಾಗಿ ಏರ್ಪಡಿಸಿದ ಈ ಕ್ರೀಡಾಕೂಟವು ಶ್ಲಾಘನೀಯವಾಗಿದೆ ಎಂದು ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಶಾಲಿನಿ ಆರ್ ಶೆಟ್ಟಿಯವರು ಈ ಕ್ರೀಡಾಕೂಟವನ್ನು ಉದ್ಘಾಟಿಸಿ ತಮ್ಮ ಭಾಷಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಸಂಚಾಲಕರಾದ ಶ್ರೀ ಪಿ. ಜಿ. ಪಂಡಿತ್‍ರವರು ರಕ್ಷಕ-ಶಿಕ್ಷಕ ಸಂಘದ ವೆಬ್‍ಸೈಟನ್ನು ಅನಾವರಣಗೊಳಿಸಿ ಮಾತನಾಡಿ, ಶಾಲೆಯ ಪ್ರಗತಿಯಲ್ಲಿ ರಕ್ಷಕ – ಶಿಕ್ಷಕ ಸಂಘದ ರಚನಾತ್ಮಕ ಪಾಲ್ಗೊಳ್ಳುವಿಕೆಯನ್ನು ಶ್ಲಾಘಿಸಿ, ಕ್ರೀಡಾಕೂಟಕ್ಕೆ ಶುಭಕೋರಿದರು.

ಆರಂಭದಲ್ಲಿ ಮಾಧವ ಕೃಪಾ ಶಾಲೆಯ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಹರೀಶ್ ಕೆ. ರಾಜ್ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುತ್ತಾ, ಪ್ರಾಸ್ತಾವಿಕವಾಗಿ ಮಾತನಾಡಿ ಬೆರಳೆಣಿಕೆಯ ಶಾಲೆಗಳಲ್ಲಿ ಮಾತ್ರ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿವೆ. ಇಂತಹ ಚಟುವಟಿಕೆಗಳಿಂದ ಶಾಲೆ  ಉತ್ತಮ ಭಾಂದವ್ಯ ಏರ್ಪಡುತ್ತದೆ ಮತ್ತು ಮಾಧವ ಕೃಪಾ ಶಾಲೆಯ ಆಡಳಿತ ವರ್ಗದ ಸಂಪೂರ್ಣ ಸಹಕಾರ ತಮಗೆ ದೊರಕಿರುವುದು ಬಹಳ ಸಂತಸ ತಂದಿದೆ ಎಂದರು.

ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಜೆಸ್ಸಿ ಆ್ಯಂಡ್ರ್ಯೂಸ್, ಉಪ ಪ್ರಾಂಶುಪಾಲರುಗಳಾದ ಶ್ರೀಮತಿ ಜ್ಯೋತಿ ಸಂತೋಷ್, ಶ್ರೀಮತಿ ಶಕಿಲಾಕ್ಷಿ ಕೃಷ್ಣ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಮಾ ಕೆ. ರಾವ್,ರಕ್ಷಕ-ಶಿಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ವೆಂಕಟೇಶ್ ಭಟ್, ಉಪಾಧ್ಯಕ್ಷ ದೇವಪ್ಪ ನಾಯ್ಕ್, ಕೋಶಾಧಿಕಾರಿ ಶ್ರೀಮತಿ ಸೋನಾ ಜೆ.ಪಿ. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ – ರಕ್ಷಕ ಸಂಘದ ಕಾರ್ಯದರ್ಶಿ ನಾಗರಾಜ್ ಕಟೀಲ್ ಧನ್ಯವಾದ ಸಮರ್ಪಣೆಗೈದರು.

No Comments

Leave A Comment