Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬೈನಾದಲ್ಲಿ ಮತ್ತೆ ಕನ್ನಡಿಗರ 121 ಮನೆ ತೆರವಿಗೆ ಸಿದ್ಧತೆ!

ಪಣಜಿ(ವಾಸ್ಕೊ): ಗೋವಾದ ಬೈನಾ ಬೀಚ್‌ನಲ್ಲಿರುವ ಮನೆಗಳ ತೆರವಿಗೆ ಮುರಗಾಂವ ಉಪ ಜಿಲ್ಲಾಧಿಕಾರಿ
ಕಾರ್ಯಾಲಯದಲ್ಲಿ  ಸಿದ್ಧತೆ ಮಾಡಿಕೊಂಡಿದ್ದು, ಗೋವಾ ಬೈನಾ ಆಪರೇಷನ್‌ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಶೀಘ್ರವೇ ಕೈಗೊಳ್ಳುವ ಸಾಧ್ಯತೆಯಿದೆ.

ಬೈನಾದ 121 ಮನೆಗಳು ಸಿಆರ್‌ಜೆಡ್‌ ಕ್ಷೇತ್ರದಲ್ಲಿರುವುದರಿಂದ ಈ ಮನೆಗಳು ಯಾವುದೇ ಸಮಯದಲ್ಲಿ ತೆರವುಗೊಳ್ಳುವ ಭೀತಿ ಎದುರಾಗಿದೆ.

ಕಾಟೆಬೈನಾದಲ್ಲಿರುವ ಮನೆಗಳನ್ನು ಗೋವಾ ಸರ್ಕಾರ ಕಳೆದ 3 ವರ್ಷಗಳಿಂದ ಹಂತ ಹಂತವಾಗಿ ತೆರವು ಮಾಡುತ್ತಾ ಬಂದಿದ್ದು, ಇದರಿಂದಾಗಿ ಕನ್ನಡಿಗರ ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ಇದೀಗ ಬೈನಾ ಬೀಚ್‌ ಸೌಂದರ್ಯ ಕಾಮಗಾರಿ ಆರಂಭಗೊಂಡಿದೆ. ಇದರಿಂದಾಗಿ ತೆರವು ಕಾರ್ಯಾಚರಣೆ ಆದೇಶ ಶೀಘ್ರವೇ ಹೊರಬೀಳಲಿದೆ. ಬೈನಾದಲ್ಲಿನ ಕೆಲವು ಮನೆಗಳಿಗೆ ನ್ಯಾಯಾಲಯದಿಂದ ಸ್ಟೆ ಆರ್ಡರ್‌ ಲಭಿಸಿದೆ. ಆ ಮನೆಗಳನ್ನು ಶೀಘ್ರದಲ್ಲಿಯೇ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.

ಗೋವಾದ ಬೈನಾ ಬೀಚ್‌ನಲ್ಲಿ ಮನೆ ಕಳೆದುಕೊಂಡ ಕನ್ನಡಿಗರ ಕುಟುಂಬಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿ ಕೊಡುವುದಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದುಕೊಂಡಿದೆ. ಶಾಶ್ವತ ಪುನರ್ವಸತಿ ಲಭಿಸುವುದೆಂಬ ದಾರಿ ಕಾಯುತ್ತ ಕುಳಿತಿರುವ ನಿರಾಶ್ರಿತ ಕನ್ನಡಗರು ಒಂದೆಡೆಯಾದರೆ, ಇನ್ನೊಂದೆಡೆ ಮತ್ತೆ ಬೈನಾದಲ್ಲಿ ಮನೆ ಕಳೆದುಕೊಳ್ಳುವ ಭೀತಿ ಎದುರಿಸುವಂತಾಗಿದೆ.

No Comments

Leave A Comment