Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ನಕ್ಸಲರಿಂದ 6 ವಾಹನಗಳಿಗೆ ಬೆಂಕಿ; ವೇ ಬ್ರಿಜ್‌ ಸ್ಫೋಟ

ರಾಯಪುರ : ಛತ್ತೀಸ್‌ಗಢ – ಜಾರ್ಖಂಡ್‌ ಗಡಿ ಪ್ರದೇಶದಲ್ಲಿನ ಹಿಂಡಾಲ್ಕೊ ಕಂಪೆನಿಯ ಬಾಕ್ಸೆ„ಟ್‌ ಗಣಿಗೆ ಇಂದು ಶನಿವಾರ ನಸುಕಿನ ವೇಳೆ ನುಗ್ಗಿದ ನಕ್ಸಲರು ಆರು ವಾಹನಗಳಿಗೆ ಬೆಂಕಿ ಹಚ್ಚಿ ವೇ ಬ್ರಿಜ್‌ ಘಟಕವೊಂದನ್ನು ಸ್ಫೋಟಿಸಿದರೆಂದು ಪೊಲೀಸರು ತಿಳಿಸಿದ್ದಾರೆ.

ಛತ್ತೀಸ್‌ಗಢದ ಬಲರಾಮಪುರ ಜಿಲ್ಲೆಯಯಲ್ಲಿನ ಕುಡಾಗ್‌ ಗಣಿಗೆ ಇಂದು ನಸುಕಿನ 1ರಿಂದ 2 ಗಂಟೆಯ ನಡುವಿನ ಅವಧಿಯಲ್ಲಿ ವೇಳೆ 50 ಮಂದಿ ಸಶಸ್ತ್ರ ಮಾವೋವಾದಿಗಳು ನುಗ್ಗಿದರು.  ಅಲ್ಲಿದ್ದ ಒಂದು ಪೊಕ್ಲೇನ್‌ ಯಂತ್ರ, ಒಂದು ಟ್ರಕ್‌, ಮತ್ತು ಹೈವಾ ಟ್ರಕ್‌ ಸೇರಿದಂತೆ ಒಟ್ಟು ಆರು ವಾಹನಗಳಿಗೆ ಬೆಂಕಿ ಹಚ್ಚಿದರು. ಬಳಿಕ ಕುಡಾಗ್‌ ಮತ್ತು ಕುಕುಡ್‌ ಎಂಬಲ್ಲಿನ ವೇ ಬ್ರಿಜ್‌ ಘಟಕಗಳನ್ನು ಸ್ಫೋಟಿಸಿದರು.

ಮಾವೋವಾದಿಗಳ ಈ ದಾಳಿಯಲ್ಲಿ ಯಾವುದೇ ಜೀವಹಾನಿ ಆಗಿಲ್ಲ; ಯಾರೂ ಗಾಯಗೊಂಡಿಲ್ಲ; ನಕ್ಸಲರು ಈ ದಾಳಿಯ ಬಳಿಕ ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment