Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ರಾಜಸ್ಥಾನದಲ್ಲಿ ಭೀಕರ ಅಪಘಾತ;11 ಯಾತ್ರಿಕರ ದುರ್ಮರಣ

ಸೀಕಾರ್‌: ಇಲ್ಲಿನ ಬಿಕಾನೇರ್‌ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 11 ರಲ್ಲಿ ಬುಧವಾರ ಯಾತ್ರಿಕರಿದ್ದ ಬಸ್ಸೊಂದು ಟ್ರಕ್‌ಗೆ ಢಿಕ್ಕಿಯಾಗಿ  ಸಂಭವಿಸಿದ ಭೀಕರ ಅವಘಡದಲ್ಲಿ 11 ಮಂದಿ ದಾರುಣವಾಗಿ  ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ  ಗಾಯಗೊಂಡಿದ್ದಾರೆ.

ಯಾತ್ರಿಕರಿಂದ ತುಂಬಿದ್ದ ರಾಜಸ್ಥಾನ ಲೋಕ ಪರಿವಾಹನ್‌ ಹೆಸರಿನ ಬಸ್‌ ಓವರ್‌ ಟೇಕ್‌ ಮಾಡುವ ವೇಳೆ  ಲಾರಿಗೆ ಢಿಕ್ಕಿಯಾಗಿದೆ. ದಟ್ಟ ಮಂಜು ಇದ್ದ ಕಾರಣ ಅವಘಡ ಸಂಭಿವಿಸಿದೆ ಎಂದು ವರದಿಯಾಗಿದೆ.

ಗಾಯಾಳುಗಳನ್ನು ರಕ್ಷಣಾ ಕಾರ್ಯ ನಡೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

No Comments

Leave A Comment