Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಹೆಗ್ಗಡೆ ಭಾರತ ರತ್ನ : ಪೇಜಾವರ ಶ್ರೀ ಹಾರೈಕೆ

ಉಡುಪಿ: ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ಹೆಗ್ಗಡೆಯವರು ಮಾಡದ ಸತ್ಕಾರ್ಯವಿಲ್ಲ. ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಧರ್ಮಸ್ಥಳದಿಂದಾಚೆಗೆ ದೇಶವ್ಯಾಪಿಯಾಗಿ ವಿಸ್ತರಿಸಿದ ಹೆಗ್ಗಡೆಯವರು ದೇಶವನ್ನೇ “ಧರ್ಮಸ್ಥಳ’ ವನ್ನಾಗಿಸಿದ್ದಾರೆ. ಅವರು ಭಾರತ ರತ್ನ ಗೌರವಕ್ಕೆ ಪಾತ್ರರಾಗಿ ದೇಶದ ರತ್ನವಾಗಬೇಕು ಎಂದು ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು.

ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಜ.2ರಂದು ಪರ್ಯಾಯ ಶ್ರೀ ಪೇಜಾವರ ಮಠ, ಶ್ರೀಕೃಷ್ಣ ಮಠಗಳ ಆಶ್ರಯದಲ್ಲಿ ಉಡುಪಿಯ ನಾಗರಿಕರು ಮತ್ತು ಭಕ್ತ ಮಹನೀಯರ ಸಹಯೋಗದಲ್ಲಿ ಜರಗಿದ ಡಾ| ಹೆಗ್ಗಡೆ ಅಭಿನಂದನ ಸಮಾರಂಭದಲ್ಲಿ ಅಭಿನಂದನೆ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಶಿಕ್ಷಣ, ವೈದ್ಯಕೀಯ, ಅನ್ನದಾನ, ಭಜನೆ, ಯೋಗ, ನೈತಿಕತೆ, ಕೃಷಿ, ದೇಗುಲಗಳ ಜೀರ್ಣೋದ್ಧಾರ ಹೀಗೆ ಸತ್ಕಾರ್ಯಗಳನ್ನು ಮಾಡುತ್ತಾ ಓರ್ವ ಧರ್ಮಾಧಿಕಾರಿ ಹೇಗಿರಬೇಕೆಂಬುದನ್ನು ಡಾ| ಹೆಗ್ಗಡೆಯವರು ತೋರಿಸಿಕೊಟ್ಟಿದ್ದಾರೆ. ನಮಗೆ ಇವರ ಇನ್ನಷ್ಟು ಕಾರ್ಯಸಾಧನೆಗಳನ್ನು ನೋಡಿ ಸಂತೋಷ ಪಡುವ ಅವಕಾಶ ಒದಗಲಿ. ನಮ್ಮ ಪರ್ಯಾಯ ಅವಧಿಯ ವಿಶಿಷ್ಟ ಕಾರ್ಯಕ್ರಮಗಳಲ್ಲಿ ಡಾ| ಹೆಗ್ಗಡೆ ಅಭಿನಂದನೆ ಕೂಡ ಒಂದು ಎಂದು ಶ್ರೀಗಳು ನುಡಿದರು.

ಪೇಜಾವರ ಶ್ರೀಗಳ ಪುಣ್ಯ ಸಂಪರ್ಕ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ| ವೀರೇಂದ್ರ ಹೆಗ್ಗಡೆಯವರು, ಪಟ್ಟಾಭಿಷೇಕ ಆದ ಅನಂತರ ನನಗೆ ಲಭಿಸಿದ ದೊಡ್ಡ ಪುಣ್ಯವೆಂದರೆ ಪೇಜಾವರ ಶ್ರೀಗಳ ಸಂಪರ್ಕ. ಇದರಿಂದ ಎಲ್ಲ ಪುಣ್ಯಾತ್ಮರ ಸಂಪರ್ಕದ ಭಾಗ್ಯ ಒದಗಿತು. ಪೇಜಾವರ ಶ್ರೀಗಳ ಮಾತಿನಂತೆ ಪ್ರತಿಫ‌ಲಾಪೇಕ್ಷೆ ಇಲ್ಲದ ಸೇವೆ ಯನ್ನು ಮಾಡುತ್ತಾ ಬಂದಿದ್ದೇನೆ. ಸೇವೆಗಿಂತ ಮಿಗಿ ಲಾದುದು ಯಾವುದೂ ಇಲ್ಲ ಎಂಬುದನ್ನು ಅರಿತು ಕೊಂಡಿದ್ದೇನೆ. “ಪೇಜಾವರ ಶ್ರೀಗಳು ಉಪದೇಶಿಸುವ ಶ್ರೀಕೃಷ್ಣನಾದರೆ ಹೆಗ್ಗಡೆಯವರು ಅದನ್ನು ಪಾಲಿಸುವ ಅರ್ಜುನ’ ಎಂಬ ಮಾತು 70ರ ದಶಕದಿಂದಲೇ ಇದೆ. ಅಂತೆಯೇ ನಾನು ಅವರ ಆದೇಶ ಪಾಲಿಸುತ್ತಾ ಬಂದಿದ್ದೇನೆ ಎಂದರು.

ಬಲಿಷ್ಠ ನಂಟು
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ಉಡುಪಿ ಮಠಾಧೀಶರು ಮತ್ತು ಹೆಗ್ಗಡೆಯವರದ್ದು ನಿಕಟ ಸಂಬಂಧ. ಡಾ| ಹೆಗ್ಗಡೆಯವರು ಎಲ್ಲ ಕ್ಷೇತ್ರಗಳಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಅವರ ಜನಸೇವೆಯ ಹುಮ್ಮಸ್ಸು  ಎಲ್ಲ  ರಾಜಮಹಾರಾಜ ರನ್ನು ಮೀರಿಸುವಂತಹುದು ಎಂದು ಬಣ್ಣಿಸಿದರು.

ಡಾ| ಹೆಗ್ಗಡೆಯವರು ತಾನು ದಾನ ಮಾಡುವು ದಲ್ಲದೆ ಇತರರೂ ದಾನ ಮಾಡುವಂತೆ ಪ್ರೇರೇಪಿಸು ವವರು. ಇದು ಹೃದಯವಂತರಿಂದ ಮಾತ್ರ ಸಾಧ್ಯ ಎಂದು ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದರು.

ಈಶಾನ್ಯಕ್ಕೆ ಸೇವೆ: ಆಚಾರ್ಯ
ಗೌರವ ಉಪಸ್ಥಿತರಾಗಿದ್ದ ನಾಗಾಲ್ಯಾಂಡ್‌ ರಾಜ್ಯಪಾಲ ಪಿ.ಬಿ. ಆಚಾರ್ಯ ಅವರು, ಡಾ| ಹೆಗ್ಗಡೆ ಯವರು ಸಾಮಾಜಿಕ ಸಾಧನೆಯ ಜತೆಗೆ ಸಮನ್ವಯತೆಗೂ ಪ್ರಯತ್ನಿಸುತ್ತಿದ್ದಾರೆ. ಅವರ ಸೇವಾ ಕಾರ್ಯ ಈಶಾನ್ಯ ರಾಜ್ಯಗಳಿಗೂ ವಿಸ್ತರಿಸಲಿ ಎಂದರು. ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಹೇಮಾವತಿ ವಿ. ಹೆಗ್ಗಡೆ, ಕವಿತಾ ಪಿ.ಬಿ. ಆಚಾರ್ಯ ಉಪಸ್ಥಿತ ರಿದ್ದರು. ವಿದ್ವಾಂಸ ಪ್ರೊ| ವೆಂಕಟ ನರಸಿಂಹಾಚಾರ್ಯ ಅಭಿ ನಂದನ ನುಡಿಗಳನ್ನಾಡಿದರು. ಪ್ರದೀಪ್‌ ಕುಮಾರ್‌ ಕಲ್ಕೂರ ಅಭಿನಂದನ ಪತ್ರ ವಾಚಿಸಿದರು. ಮಾಜಿ ಶಾಸಕ ಕೆ. ರಘುಪತಿ ಭಟ್‌ ಸ್ವಾಗತಿಸಿದರು. ವಾಸುದೇವ ಭಟ್‌ ಪೆರಂಪಳ್ಳಿ ನಿರ್ವಹಿಸಿ, ರತ್ನ ಕುಮಾರ್‌ ವಂದಿಸಿದರು.

ಗೊಮ್ಮಟೇಶ್ವರನ ಎತ್ತರಕ್ಕೆ
ನನ್ನ 2ನೇ ಪರ್ಯಾಯ ಅವಧಿಯಲ್ಲಿ ಡಾ| ಹೆಗ್ಗಡೆಯವರು ಪಟ್ಟವೇರಿದರು. ಅಂದಿನಿಂದ ಇಂದಿನವರೆಗೂ ಅವರ ಸಾಧನೆಗಳನ್ನು ನೋಡುತ್ತಾ ಬಂದಿದ್ದೇನೆ. ಅವರು ತಾವೇ ಪ್ರತಿಷ್ಠಾಪಿಸಿದ ಗೊಮ್ಮಟೇಶ್ವರನ ಎತ್ತರಕ್ಕೆ ಬೆಳೆದು ನಿಂತಿದ್ದಾರೆ.
– ಶ್ರೀ ವಿಶ್ವೇಶತೀರ್ಥ ಶ್ರೀಪಾದರು

ಧನ್ಯರಾದೆವು
ಪ್ರಧಾನಿ ನರೇಂದ್ರ ಮೋದಿಯವರು ಬಂದು ಸಮ್ಮಾನಿಸಿರುವುದಕ್ಕಿಂತಲೂ ಪೇಜಾವರ ಶ್ರೀಗಳ ಸಮ್ಮಾನ ನನಗೆ ಬಹು ಹೆಮ್ಮೆ. ನಾನು ಯಾರಿಂದಲೂ ಸಮ್ಮಾನ ಸ್ವೀಕರಿಸದಿರಲು ಪ್ರಯತ್ನಿಸುತ್ತಿರುವುದು ಹೌದು. ಆದರೆ ಪೇಜಾವರ ಶ್ರೀಗಳದ್ದು ಗುರುಗಳ ಆದೇಶ. ಅದನ್ನು ಪಾಲಿಸಲೇಬೇಕು. ಅವರ ಸಮ್ಮಾನ ದಿಂದ ನಾನು, ನನ್ನ ಪತ್ನಿ ಧನ್ಯರಾದೆವು.
-ಡಾ| ಡಿ. ವೀರೇಂದ್ರ ಹೆಗ್ಗಡೆ

No Comments

Leave A Comment