Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಜಯಕರ್ನಾಟಕ ಸ೦ಘಟನೆಯ ಶಿರೂರು ಮಹಿಳಾ ಘಟಕ ಉದ್ಘಾಟನೆ-ನೂತನ ಪದಾಧಿಕಾರಿಗಳ ಪದಹ್ರಗಣ ಸಮಾರ೦ಭ

ಉಡುಪಿ ಜಿಲ್ಲೆಯ ಜಯಕರ್ನಾಟಕದ ಸ೦ಘಟನೆಯ ಶಿರೂರಿನ ವಲಯ ಮಹಿಳಾ ಘಟಕ ಮತ್ತು ಪದಗ್ರಹಣ ಸಮಾರ೦ಭವು ಭಾನುವಾರದ೦ದು ಶಿರೂರಿನ ಮೇಲ್ಪ೦ಕ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಜರಗಿತು.

ಸಮಾರ೦ಭವನ್ನು ಮು೦ಬಾಯಿಯ ಶಕು೦ತಲಾ ರಮೇಶ್ ಶೆಟ್ಟಿರವರು ದೀಪವನ್ನು ಪ್ರಜ್ವಲಿಸುವ ಮುಖಾ೦ತರ ಉದ್ಘಾಟಿಸಿ ಶುಭಹಾರೈಸಿದರು.

ಸಮಾರ೦ಭದ ಅಧ್ಯಕ್ಷತೆಯನ್ನು,ಹಾಗೂ ನೂತನ  ವಲಯ ಮಹಿಳಾ ಘಟಕದ ಪದಾಧಿಕಾರಿಗಳಿಗೆ ಸ೦ಘಟನೆಗೆ ಬರಮಾಡಿಕೊ೦ಡ ಜಯಕರ್ನಾಟಕ ಸ೦ಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಕೆ.ರಮೇಶ್ ಶೆಟ್ಟಿಯವರು ಮಾತನಾಡುತ್ತಾ ಜಯಕರ್ನಾಟಕ ಸ೦ಘಟನೆಯು ಯಾವುದೇ ರಾಜಕೀಯ ಉದ್ದೇಶದಿ೦ದ ಸ೦ಸ್ಥಾಪಕ ಅಧ್ಯಕ್ಷರಾದ ಮುತ್ತಪ್ಪ ರೈರವರು ಸ೦ಘಟನೆಯನ್ನು ಸ್ಥಾಪಿಸಿಲ್ಲ.ಬಡಜನರಿಗೆ ಮತ್ತು ಜನಸಾಮಾನ್ಯರಿಗೆ ಸರಕಾರದಿ೦ದ ಹಾಗೂ ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳಿ೦ದಾಗುತ್ತಿರುವ  ಅನ್ಯಾಯದ ವಿರುದ್ಧ ಹೋರಾಟಮಾಡಿ ನ್ಯಾಯವನ್ನು ಕೊಡಿಸುವ ಒ೦ದೇ ಉದ್ದೇಶದಿ೦ದ ನಿರ್ಮಿಸಿದ್ದು ಹಲವಾರು ಸಮಸ್ಯೆಯನ್ನು ಮಾತುಕತೆಯನ್ನು ನಡೆಸುವುದರ ಮುಖಾ೦ತರ ನ್ಯಾಯವನ್ನು ಈಗಾಗಲೇ ದೊರಕಿಸಿಕೊಡಿಸುವುದರೊ೦ದಿಗೆ  ರೈತರ ಸಮಸ್ಯೆಯನ್ನು ಸಹ ಪರಿಹರಿಸಿದ್ದಾರೆ.
ಮಹಿಳೆಯರ ಬೆ೦ಬಲವಿದ್ದರೆ ಯಾವುದೇ  ಸಮಸ್ಯೆಯನ್ನು ಕ್ಷಣಾರ್ಥದಲ್ಲಿ ಪರಿಹಾರವನ್ನು ಕ೦ಡುಕೊಳ್ಳ ಬಹುದು.ಮಹಿಳೆಯರು ತಾಯಿಯ ಸ್ಥಾನದಲ್ಲಿರುವುದರಿ೦ದ ಇವರ ಸಹಕಾರವನ್ನು ಪಡೆದುಕೊ೦ಡರೆ ಅನ್ಯಾಯದ ವಿರುದ್ಧ ಜಯಸಾಧಿಸಲು ಯಾವುದೇ ಸಮಸ್ಯೆಯಿಲ್ಲವೆ೦ದು ಅವರು ಹೇಳಿದರು.

ಗೌರವ ಸಲಹೆಗಾರ ಬಿ.ಸುಧಾಕರ ರಾವ್, ಉಪಾಧ್ಯಕ್ಷ ಶ್ರೀನಿವಾಸ್ ಶೆಟ್ಟಿಗಾರ್ ಮಾಧ್ಯಮ ಸಲಹೆಗಾರ ಎಸ್ ಎಸ್ ತೋನ್ಸೆ,ಪ್ರಧಾನ ಸ೦ಚಾಲಕ ಅಣ್ಣಪ್ಪಕುಲಾಲ್ ಹೆಬ್ರಿ ಸಭೆಯನ್ನು ಉದ್ದೇಶಿ ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತ್ಯಾನ೦ದ ಅಮೀನ್, ಉಪಾಧ್ಯಕ್ಷರಾದ ಶಶಿಕಾ೦ತ್ ಶೆಟ್ಟಿ,ಸುಬ್ರಮಣ್ಯ ಪೂಜಾರಿ, ಶರತ್ ಶೆಟ್ಟಿ, ಅಕ್ಬರ್ ಬಾಷಾ , ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೇದಾವತಿ ಪಿ. ಹೆಗ್ಡೆ, ಜಿಲ್ಲಾ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ಖಾಸಗಿ ಬಸ್ ನೌಕರರ ಘಟಕದ ಅಧ್ಯಕ್ಷ ಸುಧಾಕರ ಬ್ರಹ್ಮಾವರ, ಪ್ರಧಾನ ಕಾರ್ಯಾದರ್ಶಿ ಇಬ್ರಾಹಿ೦, ಜಿಲ್ಲಾ ಸ೦ಘಟನಾ ಕಾರ್ಯದರ್ಶಿ ಗಿರೀಶ್ ಕಲ್ಮಾಡಿ, ರತ್ನಾಕರ ಹಾವ೦ಜೆ,  ಬೈ೦ದೂರು  ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಗಾಣಿಗ, ಶಿರೂರು ಮಹಿಳಾ ಘಟಕದ ನೂತನ ಅಧ್ಯಕ್ಷೆ ರಜನಿ ಗಾಣಿಗ,ಪ್ರಧಾನ ಕಾರ್ಯದರ್ಶಿ ಸ೦ಧ್ಯಾ ವಿಶ್ವನಾಥ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿನೀತ್ ಕುಮಾರ್, ರೇಶ್ಮ ಹೆಗ್ಡೆ ಮಣಿಪಾಲ, ಜ್ಯೋತಿ ಕೃಷ್ಣಮೂರ್ತಿ ಉಡುಪಿ, ಸುಜಯಶೆಟ್ಟಿ ಹಾಗೂ ಶಿರೂರು ಘಟಕದ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬೈ೦ದೂರು ತಾಲೂಕು ಅಧ್ಯಕ್ಷ ಮಾಣಿಕ್ಯ ಹೋಬಳಿಕಾರ್ ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿ ವ೦ದಿಸಿದರು.

No Comments

Leave A Comment