Log In
BREAKING NEWS >
ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಉಗ್ರರ ದಾಳಿ: ಐವರು ಯೋಧರು ಹುತಾತ್ಮ

ಶ್ರೀನಗರ: ವರ್ಷಾಂತ್ಯದ ದಿನವೇ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿರುವ ಸಿಆರ್‌ಪಿಎಫ್ ಶಿಬಿರದ ಮೇಲೆ ಉಗ್ರರ ದಾಳಿ ನಡೆದಿದೆ. ಈ ವೇಳೆ ಐವರು ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ. ದಾಳಿಯ ಬೆನ್ನಲ್ಲೇ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ದಾಳಿಯ ಹೊಣೆಯನ್ನು ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಹೊತ್ತುಕೊಂಡಿದೆ.

ಶನಿವಾರ ತಡರಾತ್ರಿ 2 ಗಂಟೆಯ ವೇಳೆಗೆ ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಭಯೋತ್ಪಾದಕರ ಗುಂಪೊಂದು ಸಿಆರ್‌ಪಿಎಫ್ ತರಬೇತಿ ಕೇಂದ್ರದ ಮೇಲೆ ಏಕಾಏಕಿ ದಾಳಿ ನಡೆಸಿತು. ಆ ಉಗ್ರರ ಬಳಿ ಅಂಡರ್‌ ಬ್ಯಾರೆಲ್‌ ಗ್ರೆನೇಡ್‌ಗಳು ಮತ್ತು ಆಟೋಮ್ಯಾಟಿಕ್‌ ಶಸ್ತ್ರಾಸ್ತ್ರಗಳೂ ಇದ್ದವು. ಗುಂಡಿನ ದಾಳಿ ಯಿಂದಾಗಿ ಶಿಬಿರದಲ್ಲಿದ್ದ ನಾಲ್ವರು ಯೋಧರು ಹುತಾ ತ್ಮ ರಾದರೆ, ಮತ್ತೂಬ್ಬರು ಹೃದಯಾಘಾತದಿಂದ ಮೃತಪಟ್ಟರು. ಇನ್ನೂ ಮೂವರು ಸೇನಾನಿಗಳು ಗಾಯಗೊಂಡರು ಎಂದು ಸಿಆರ್‌ಪಿಎಫ್ ವಕ್ತಾರ ರಾಜೇಶ್‌ ಯಾದವ್‌ ತಿಳಿಸಿದ್ದಾರೆ.

ದಾಳಿ ನಡೆದ ತಕ್ಷಣ ಕಾರ್ಯಪ್ರವೃತ್ತಗೊಂಡ ಭದ್ರತಾ ಪಡೆಯ ಯೋಧರು ಪ್ರತಿದಾಳಿ ಆರಂಭಿಸಿದರು. ಹಲವು ಗಂಟೆಗಳ ಕಾಲ ಗುಂಡಿನ ಚಕಮಕಿ ಮುಂದುವರಿಯಿತು. ಈ ವೇಳೆ ಮೂವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಭದ್ರತಾ ಪಡೆ ಯೋಧರು ಯಶಸ್ವಿಯಾದರು. ಮೃತ ಉಗ್ರರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ ಎಂದೂ ಯಾದವ್‌ ತಿಳಿಸಿದ್ದಾರೆ. ದಾಳಿ ವೇಳೆ ಸಿಆರ್‌ಪಿಎಫ್ನ ಕಟ್ಟಡದಲ್ಲಿದ್ದ 6 ಮಂದಿ ಯೋಧರನ್ನು ರಕ್ಷಿಸಲಾಗಿದೆ.

ಖಂಡನೆ: ಸಿಆರ್‌ಪಿಎಫ್ ಕ್ಯಾಂಪ್‌ ಮೇಲೆ ನಡೆದ ದಾಳಿಯನ್ನು “ಹೇಡಿತನದ ಕೃತ್ಯ’ ಎಂದು ಕರೆದಿರುವ ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ, ಹುತಾತ್ಮರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಉಪಮುಖ್ಯಮಂತ್ರಿ ನಿರ್ಮಲ್‌ ಸಿಂಗ್‌ ಅವರೂ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇಂಥ ಕೃತ್ಯವನ್ನು ಸಮಾ ಜದ ಪ್ರತಿಯೊಂದು ವರ್ಗವೂ ಖಂಡಿಸಬೇಕು ಎಂದಿದ್ದಾರೆ.

ಮತ್ತಷ್ಟು ದಾಳಿಯ ಭೀತಿ
ಸಿಆರ್‌ಪಿಎಫ್ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಬಹುದು ಎಂಬ ನಿರ್ದಿಷ್ಟ ಅಲರ್ಟ್‌ ಹೊರ ತಾಗಿಯೂ ದಾಳಿ ನಡೆದಿದೆ. ದಾಳಿ ಕುರಿತು ಮೊದಲೇ ಗುಪ್ತಚರ ಸಂಸ್ಥೆಗಳಿಂದ ಸ್ಪಷ್ಟ ಮಾಹಿತಿ ಸಿಕ್ಕಿತ್ತು ಎಂದು ಹಿರಿಯ ಪೊಲೀಸ್‌ ಅಧಿ ಕಾರಿ ಎಸ್‌.ಪಿ.ವೇದ್‌ ಅವರೇ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಸೇನಾ ಶಿಬಿರ ಗಳನ್ನು ಗುರಿಯಾಗಿಸಿಕೊಂಡು ಇನ್ನಷ್ಟು ದಾಳಿ ನಡೆಯುವ ಸಾಧ್ಯತೆಯ ಬಗ್ಗೆಯೂ ಗುಪ್ತಚರ ಮಾಹಿತಿ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿಯ ವಿದೇಶಿ ನೀತಿಯ ವೈಫ‌ಲ್ಯಕ್ಕೆ ಸಾಕ್ಷಿ: ಕಾಂಗ್ರೆಸ್‌
ಸಿಆರ್‌ಪಿಎಫ್ ಶಿಬಿರದ ಮೇಲೆ ನಡೆದ ಉಗ್ರರ ದಾಳಿಗೆ ಸಂಬಂ ಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ ನಡೆಸಿದೆ. ಇದು ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿಯಲ್ಲಿನ ವೈಫ‌ಲ್ಯಕ್ಕೆ ಸಾಕ್ಷಿ ಎಂದು ಹೇಳಿದೆ. ಪದೇ ಪದೆ ನಡೆಯುತ್ತಿರುವ ಇಂಥ ದಾಳಿಗಳು ದೇಶವಿರೋಧಿ ಶಕ್ತಿಗಳಿಗೆ ಭಾರತದ ಬಗ್ಗೆ ಭಯವಿಲ್ಲ ಎಂಬುದನ್ನು ಸಾಬೀತುಪಡಿಸುತ್ತಲೇ ಇವೆ. ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿ ಅವರು, ಭಾರತವೊಂದು ಬಲಿಷ್ಠ ರಾಷ್ಟ್ರ ಎನ್ನುತ್ತಾರೆ. ಆದರೆ, ಗಡಿಯಲ್ಲಿನ ಕದನ ವಿರಾಮ ಉಲ್ಲಂಘನೆಗಳು, ಸಾವು-ನೋವುಗಳ ಸಂಖ್ಯೆ ವೃದ್ಧಿಸುತ್ತಲೇ ಇವೆ. ದೇಶದ ಬಾಹ್ಯ ಮತ್ತು ಆಂತರಿಕ ಶತ್ರುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವೆಲ್ಲರೂ ಬಯಸು ತ್ತೇವೆ. ಆದರೆ, ಈಗಿನ ಬೆಳವಣಿಗೆಗಳು ಪ್ರಧಾನಿಯ ವಿದೇಶಿ ನೀತಿಯಲ್ಲಿನ ವೈಫ‌ಲ್ಯವಾಗಿದೆ ಎಂದು ಕಾಂಗ್ರೆಸ್‌ ವಕ್ತಾರೆ ಸುಷ್ಮಿತಾ ದೇವ್‌ ಆರೋಪಿಸಿದ್ದಾರೆ.

Read more at https://www.udayavani.com/kannada/news/national-news/261745/terror-attack-five-warriors-martyred#SbU48bYr6iVXUShi.99

No Comments

Leave A Comment