Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2017 – ಸಮಾರೋಪ ಸಮಾರಂಭ

ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ – 2017 ಇದರ ಸಮಾರೋಪ ಸಮಾರಂಭ ಉಡುಪಿಯ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಇಲ್ಲಿ ದಿನಾಂಕ 29/12/2017ರಂದು ನಡೆಯಿತು.

ಪೊಲೀಸ್‌ ಕ್ರಿಡಾಕೂಟವನ್ನು ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಡಾ. ಜಿ.ಎಸ್‌. ಚಂದ್ರಶೇಖರ, ವೈದ್ಯಕೀಯ ನಿರ್ದೇಶಕರು, ಆದರ್ಶ ಆಸ್ಪತ್ರೆ ಉಡುಪಿ ಇವರು ಭಾಗವಹಿಸಿದರು.

ಕ್ರೀಡಾಕೂಟದ ಸಮಗ್ರ ಚಾಂಪಿಯನ್‌ನಲ್ಲಿ ಪುರುಷರ ವಿಭಾಗದಲ್ಲಿ ಕುಂದಾಪುರ ಉಪ ವಿಭಾಗದ ನಾಗೇಶ್‌ ಬೈಂದೂರು ಹಾಗೂ ಮಹಿಳೆಯ ವಿಭಾಗದಲ್ಲಿ ಉಡುಪಿ ಉಪ ವಿಭಾಗದ ಕುಮಾರಿ ಚೈತ್ರ ಇವರುಗಳು ಪಡೆದುಕೊಂಡರು. ಸಮಗ್ರ ತಂಡ ಚಾಂಪಿಯನ್‌ ಆಗಿ ಉಡುಪಿ ಡಿಎಆರ್‌ ತಂಡ ಪಡೆದುಕೊಂಡಿತು.

ಸಮಾರಂಭದಲ್ಲಿ  ಸಂಜೀವ ಎಂ. ಪಾಟೀಲ್‌ ಐಪಿಎಸ್‌, ಪೊಲೀಸ್‌ ಅಧೀಕ್ಷಕರು, ಉಡುಪಿ, ಕುಮಾರ್‌ಚಂದ್ರ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಉಡುಪಿ, ರಿಷಿಕೇಶ್‌ ಸೇನಾವಾನೆ ಐಪಿಎಸ್‌, ಸಹಾಯಕ ಪೊಲೀಸ್‌ ಅಧೀಕ್ಷಕರು, ಕಾರ್ಕಳ, ಕುಮಾರ ಸ್ವಾಮಿ, ಪೊಲೀಸ್‌ ಉಪಾಧೀಕ್ಷಕರು, ಉಡುಪಿ ಉಪ ವಿಭಾಗ,  ಎಚ್‌ ಪ್ರವೀಣ್‌ ನಾಯಕ್‌, ಪೊಲೀಸ್‌ ಉಪಾಧೀಕ್ಷಕರು, ಕುಂದಾಪುರ ಉಪ ವಿಭಾಗ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್‌ ಅಧೀಕಾರಿಗಳು, ಜಿಲ್ಲೆಯ ಎಲ್ಲಾ ಪೊಲೀಸ್‌ ಕ್ರೀಡಾಪಟುಗಳು ಮತ್ತು ಇತರ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.

No Comments

Leave A Comment