Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಪದ್ಮಾವತಿ ಅಲ್ಲ ಪದ್ಮಾವತ್‌: ಅಂತೂ ಸಿಕ್ಕಿತು CBFC ಸರ್ಟಿಫಿಕೇಟ್

ಹೊಸದಿಲ್ಲಿ : ಐತಿಹಾಸಿಕ ಕಥಾ ಚಿತ್ರ ಪದ್ಮಾವತಿಗೆ ಕೇಂದ್ರ ಸೆನ್ಸಾರ್‌ ಮಂಡಳಿ ಯು/ಎ ಸರ್ಟಿಫಿಕೇಟ್‌ ನೀಡಿದೆ; ಆದರೆ ಚಿತ್ರದ ಹೆಸರನ್ನು ಪದ್ಮಾವತ್‌ ಎಂದು ಬದಲಾಯಿಸುವಂತೆ ಸೂಚಿಸಿದೆ.

ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ಮತ್ತು ಶಾಹೀದ್‌ ಕಪೂರ್‌ ನಟನೆಯ ಪದ್ಮಾವತಿ ಚಿತ್ರ ಸೆಟ್ಟಿಗೆ ಹೋದಂದಿನಿಂದಲೂ ವಿವಾದಕ್ಕೆ ಗುರಿಯಾಗುತ್ತಲೇ ಬಂದಿತ್ತು. ಇತಿಹಾಸವನ್ನು ತಿರುಚಲಾಗಿದೆ ಎಂಬ ಕಾರಣವನ್ನು ಆರೋಪಿ ರಾಜಸ್ಥಾನದ ರಾಜಪೂತ ಕರಣಿ ಸೇನೆ ಚಿತ್ರ ಬಿಡುಗಡೆಗೆ ಬಹಿಷ್ಕಾರ ಹಾಕಿ ದೇಶಾದ್ಯಂತ ಉಗ್ರ ಪ್ರತಿಭಟನೆಗೆ ಕಿಡಿ ಹಚ್ಚಿತ್ತು.

ಸಂಜಯ್‌ ಲೀಲಾ ಭನ್ಸಾಲಿ ಅವರ ಈ ಐತಿಹಾಸಿಕ ವಿವಾದಿತ ಕಥಾ ಚಿತ್ರವು ಈ ಮೊದಲು 2017ರ ಡಿ.1ರಂದು ತೆರೆ ಕಾಣುವುದೆಂದು ಹೇಳಲಾಗಿತ್ತು. ಆದರೆ ಸಕಾಲದಲ್ಲಿ CBFC ಸರ್ಟಿಫಿಕೇಟ್‌ ಪಡೆಯುವಲ್ಲಿ ವಿಫ‌ಲವಾಗಿತ್ತು. ಪರಿಣಾಮವಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿತ್ತು.

ಡಿಸೆಂಬರ್‌ 28ರಂದು CBFC ಪರಿಶೀಲನಾ ಸಮಿತಿ ಸಭೆ ನಡೆದು ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್‌ ನೀಡಲು ತೀರ್ಮಾನವಾಯಿತು; ಆದರೆ ಚಿತ್ರದ ಹೆಸರನ್ನು ಪದ್ಮಾವತಿಗೆ ಬದಲು ಪದ್ಮಾವತ್‌ ಎಂದು ಬದಲಾಯಿಸುವಂತೆ ಚಿತ್ರ ನಿರ್ಮಾಪಕರಿಗೆ ಸೂಚಿಸಲಾಯಿತು.

ಸಂಜಯ್‌ ಲೀಲಾ ನಿರ್ದೇಶನದ ಪದ್ಮಾವತಿ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿ ಪಾತ್ರವನ್ನೂ ಶಾಹೀದ್‌ ಕಪೂರ್‌ ಮಹಾರಾವಲ್‌ ರತನ್‌ ಸಿಂಗ್‌ ಪಾತ್ರವನ್ನೂ ರಣವೀರ್‌ ಸಿಂಗ್‌ ಅಲಾವುದ್ದೀನ್‌ ಖೀಲ್‌ಜಿ ಪಾತ್ರವನ್ನೂ ನಿರ್ವಹಿಸಿದ್ದಾರೆ.

No Comments

Leave A Comment