Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಮಂಗಳೂರು:ಹಾಡಹಗಲೆ ಮನೆಗೆ ನುಗ್ಗಿ ಮಹಿಳೆಯ ಹತ್ಯೆ,ದರೋಡೆ

ಮಂಗಳೂರು: ತಾಲೂಕಿನ ಕಿನ್ನಿಗೋಳಿಯ  ಐಕಳ ಎಂಬಲ್ಲಿ ಶನಿವಾರ ಹಾಡ ಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ಹತ್ಯೆಗೈದು ದರೋಡೆ ನಡೆಸಿದ ಆತಂಕಕಾರಿ ಘಟನೆ ನಡೆದಿದೆ.

 ಸದಾಂಶು ಶೆಟ್ಟಿ ಅವರ  ಮನೆಗೆ ನುಗ್ಗಿದ ದುಷ್ಕರ್ಮಿಗಳು  ಮನೆಯಲ್ಲಿ ಒಬ್ಬರೇ ಇದ್ದ ಅವರ ಪತ್ನಿ ವಾಸಂತಿ (58) ಅವರನ್ನು ಹೊಡೆದು ಹತ್ಯೆಗೈದಿರುವುದಾಗಿ  ವರದಿಯಾಗಿದೆ.

ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಬಳಿಕ ವಾಸಂತಿ ಅವರು ಪತಿ ಗೆ ಕರೆ ಮಾಡಿ ವಿಚಾರ ತಿಳಿಸಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಚುರುಕುಗೊಳಿಸಿದ್ದಾರೆ.

No Comments

Leave A Comment