Log In
BREAKING NEWS >
ಚು೦...ಚು೦ ಚಳಿಯಲ್ಲಿ ಬೃಹತ್ ಜನಸ್ತೋಮದ ನಡುವೆ ಪಲಿಮಾರು ಮಠಾಧೀಶರ ದ್ವಿತೀಯ ಪರ್ಯಾಯದ ಭವ್ಯ ಮೆರಣಿಗೆ...

ದ.ಕ್ಯಾಲಿಫೋರ್ನಿಯದಲ್ಲಿ ಶೂಟೌಟ್‌: 2 ಸಾವು; ಹಲವರಿಗೆ ಗಾಯ

ಲಾಂಗ್‌ ಬೀಚ್‌, ಅಮೆರಿಕ: ದಕ್ಷಿಣ ಕ್ಯಾಲಿಫೋರ್ನಿಯದ ಔದ್ಯಮಿಕ ತಾಣವೊಂದರಲ್ಲಿ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ ಪರಿಣಾಮವಾಗಿ ಇಬ್ಬರು ಮೃತಪಟ್ಟು ಇತರ ಹಲವರು ಗುಂಡೇಟಿನಿಂದಾಗಿ ಗಾಯಗೊಂಡಿದ್ದಾರೆಂದು ಲಾಂಗ್‌ ಬೀಚ್‌ ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಶನಿವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 2.25ರ ಹೊತ್ತಿಗೆ ನಡೆಯಿತೆಂದು ತಿಳಿಸಿರುವ ಪೊಲೀಸರು ಸದ್ಯಕ್ಕೆ ಯಾವುದೇ ಹೆಚ್ಚಿನ ಮಾಹಿತಿಗಳನ್ನು ನೀಡಿಲ್ಲ.

ಶೂಟರ್‌ ಹಾರಿಸಿದ ಗುಂಡಿಗೆ ಎಷ್ಟು ಮಂದಿ ಗಾಯಗೊಂಡರು; ಎಷ್ಟು ಮಂದಿಯ ಸ್ಥಿತಿ ಹೇಗಿದೆ ಎಂಬಿತ್ಯಾದಿ ವಿವರಗಳನ್ನು ನೀಡಲು ಪೊಲೀಸರು ನಿರಾಕರಿಸಿದರು.

ಗುರುತು ಹಾಕಲ್ಪಡದ ಕಟ್ಟಡದಿಂದ ಜನರು ಹೊರಗೋಡಿ ಬರುತ್ತಿರುವ ಜನರು ಒಳಗೆ ಶೂಟಿಂಗ್‌ ನಡೆಯುತ್ತಿರುವುದಾಗಿ ಬೊಬ್ಬಿಡುತ್ತಿದ್ದ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ.

ಎರಡು ಮಹಡಿಗಳ ಈ ಕಟ್ಟಡದಲ್ಲಿ ಹಲವು ಕಾನೂನು ಸೇವಾ ಕಚೇರಿಗಳಿವೆ; ಆದರೆ ಇಲ್ಲಿ ಯಾವ ರೀತಿಯ ವ್ಯಾಪಾರ-ವಹಿವಾಟು ನಡೆಯುತ್ತಿದೆ ಎಂಬುದನ್ನು ಪೊಲೀಸರು ತಿಳಿಸಿಲ್ಲ.

ಡಜನ್‌ಗಟ್ಟಲೆ ಪೊಲೀಸ್‌ ಅಧಿಕಾರಿಗಳು, SWAT ತಂಡದ ಸದಸ್ಯರೊಡಗೂಡಿ ಇಡಿಯ ಕಟ್ಟಡವನ್ನು ಸುತ್ತುವರಿದಿದ್ದಾರೆ. ಆದರೆ ಶೂಟಿಂಗ್‌ ಘಟನೆ ಈಗ ಮುಗಿದು ಹೋಗಿದೆ ಎಂದವರು ತಿಳಿಸಿದ್ದಾರೆ.

ಲಾಸ್‌ ಏಂಜಲ್ಸ್‌ನಿಂದ ಸುಮಾರು 20 ಮೈಲು ದಕ್ಷಿಣಕ್ಕಿರುವ ಲಾಂಗ್‌ ಬೀಚ್‌ ಪಟ್ಟಣವು ಸುಮಾರು 4,60,000 ಜನಸಂಖ್ಯೆಯನ್ನು ಹೊಂದಿದೆ. ಇದು ಲಾಸ್‌ ಏಂಜಲ್ಸ್‌ ಕೌಂಟಿಯ ದಕ್ಷಿಣ ತುದಿಯಲ್ಲಿದೆ.

No Comments

Leave A Comment