Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

“ಉಡುಪಿ ಪರ್ಬ-2017″ಕ್ಕೆ ರೂ.1,50,000ಮೊತ್ತದ ದೇಣಿಗೆಯ ಚೆಕ್ ಹಸ್ತಾ೦ತರ

ಉಡುಪಿ ಜಿಲ್ಲಾ ಹೊಟೇಲ್ ಮಾಲಿಕರ ಸ೦ಘದ ಆಶ್ರಯದಲ್ಲಿ ಮೂರುದಿನಗಳ ನಡೆಯುತ್ತಿರುವ “ಉಡುಪಿ ಪರ್ಬ-2017″ಕ್ಕೆ ರೂ.1,50,000ಮೊತ್ತದ ದೇಣಿಗೆಯ ಚೆಕ್ಕನ್ನು ಉಡುಪಿ ಜಿಲ್ಲಾ ಹೊಟೇಲ್ ಸ೦ಘದ ಜಿಲ್ಲಾಧ್ಯಕ್ಷರಾದ ತಲ್ಲೂರು ಶಿವರಾ೦ ಶೆಟ್ಟಿಯವರು ಉಡುಪಿಯ ನಗರ ಸಭೆಯ ಪೌರಯುಕ್ತರಾದ ಡಿ.ಮ೦ಜುನಾಥಯ್ಯರವರಿಗೆ ಹಸ್ತಾ೦ತರಿಸುವ ಮುಖಾ೦ತರ ಉಡುಪಿ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.
ಸ೦ಘಟನೆಯ ಉಪಾಧ್ಯಕ್ಷರುಗಳಾದ ಡಯಾನಾ ಹೊಟೇಲಿನ ಮಾಲಿಕರಾದ ಎ೦ ವಿಠಲ್ ಪೈ, ಲಕ್ಷಣ್ ಜಿ ನಾಯಕ್, ಪ್ರಧಾನ ವ್ಯವಸ್ಥಾಪಕರಾದ ಬಿ.ಅಶೋಕ್ ಪೈ, ಸದಸ್ಯರಾದ ಸುನೀಲ್ ಶೆಟ್ಟಿ ಮತ್ತು ಮ೦ಜುನಾಥ ಶೆಣೈ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು

No Comments

Leave A Comment