Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಸ್ವದೇಶೀ ನಿರ್ಮಿತ ಸೂಪರ್​ಸಾನಿಕ್​ ಇಂಟರ್​ಸೆಪ್ಟರ್​ ಕ್ಷಿಪಣಿ ಪರೀಕ್ಷೆ ಯಶಸ್ವಿ

ಭುವನೇಶ್ವರ್: ಸ್ವದೇಶೀ ನಿರ್ಮಿತ ಖಂಡಾಂತರ ಕ್ಷಿಪಣಿಯನ್ನು ಕೆಳ ಹಂತದಲ್ಲಿ ಹೊಡೆದುರುಳಿಸಬಲ್ಲ   ಸೂಪರ್​ಸಾನಿಕ್​ ಇಂಟರ್​ಸೆಪ್ಟರ್​ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ.

ಒಡಿಶಾದಲ್ಲಿರುವ ಅಬ್ದುಲ್​ ಕಲಾಂ ದ್ವೀಪದಲ್ಲಿ ಇಂದು ಕ್ಷಿಪಣಿ ಪರೀಕ್ಷೆ ನಡೆಸಲಾಗಿದ್ದು ಇದು ಅಡ್ವಾನ್ಸ್​ ಏರ್​ ಡಿಫೆನ್ಸ್​ನ ಭಾಗವಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಈ ಹಿಂದೆಯೂ ಸಹ ಇದೇ ವರ್ಷ ಫೆಬ್ರವರಿ 11 ಮತ್ತು ಮಾರ್ಚ್​ 1 ರಂದು ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು. ಆ ಎರಡು ಪರೀಕ್ಷೆಗಳೂ ಯಶಸ್ವಿಯಾಗಿದ್ದವು. ಇಂದಿನ ಕ್ಷಿಪಣಿ ಪರೀಕ್ಷೆಯಲ್ಲಿ ಹಲವು ಮಾನದಂಡಗಳ ಅಡಿಯಲ್ಲಿ ಪರಿಶೀಲನೆ ನಡೆದಿದ್ದು ಇದು ಸಹ ಅತ್ಯಂತ ಯಶಸ್ವಿಯಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ಕ್ಷಿಪಣಿಯಲ್ಲಿ ನ್ಯಾವಿಗೇಷನ್​ ವ್ಯವಸ್ಥೆ, ಅತ್ಯಾಧುನಿಕ ಕಂಪ್ಯೂಟರ್​, ಎಲೆಕ್ಟ್ರೋ ಮೆಕಾನಿಕಲ್​ ಆಕ್ಟಿವೇಟರ್​ಗಳನ್ನು ಜೋಡಣೆ ಮಾಡಲಾಗಿದ್ದು ಕ್ಷಿಪಣಿಯು ಒಟ್ಟು 7.5 ಮೀಟರ್​ ಉದ್ದವಿದೆ. ವೈರಿ ರಾಷ್ಟ್ರಗಳ ದಾಳಿಯನ್ನು ಸಮರ್ಥವಾಗಿ ತಡೆಯುವ ಸಾಮರ್ಥ್ಯ ಈ ಕ್ಷಿಪಣಿ ಇದೆ.

No Comments

Leave A Comment