Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಕೆಎಸ್‌ಆರ್‌ಟಿಸಿ ಬಸ್‌ ಟಿಟಿ ವಾಹನ ಡಿಕ್ಕಿ: ಐವರು ಸಾವು, 11 ಗಾಯ

ಬಂಗಾರುಪಾಳ್ಯಂ(ಆಂಧ್ರ): ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟಿಟಿ ವಾಹನ ನಡುವೆ ಮಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮಹಿಳೆಯರು ಸೇರಿ ಐವರು ಸಾವನ್ನಪ್ಪಿ 11 ಜನ ಗಂಭೀರ ಗಾಯಗೊಂಡಿರುವ ಘಟನೆ ಚಿತ್ತೂರು ಜಿಲ್ಲೆಯ ಬಂಗಾರುಪಾಳ್ಯಂನಲ್ಲಿ ಗುರುವಾರ ನಸುಕಿನ ಜಾವ ನಡೆದಿದೆ.

ಟಿಟಿ ವಾಹನ ಚಾಲಕ ಕಮ್ಮಗಿರಿ(35), ತುಷಾರ(23), ರೂಪಾಲಿ(22), ಸಲುಕುಮಾರಿ(45) ಮೃತಪಟ್ಟ ದುರ್ದೈವಿಗಳು. ಬೆಂಗಳೂರಿನಿಂದ ತಿರುಪತಿಗೆ ಸಾಗುತ್ತಿದ್ದ ಬಸ್‌ ಹಾಗೂ ತಿರುಪತಿಯಿಂದ ಬರುತ್ತಿದ್ದ ಟಿಟಿ ವಾಹನ ನಡುವೆ ಈ ಘಟನೆ ಸಂಭವಿಸಿದೆ. ಟಿಟಿ ವಾಹನದಲ್ಲಿದ್ದ 11 ಜನರಿಗೆ ಗಾಯಗಾಳಾಗಿದ್ದು ಚಿತ್ತೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮೃತರೆಲ್ಲರು ಮಹರಾಷ್ಟ್ರ ಮೂಲದವರೆಂದು ತಿಳಿದು ಬಂದಿದೆ. ತಿರುಪತಿ ದರ್ಶನ ಪಡೆದು ನಂತರ ಮೈಸೂರು ಪ್ರವಾಸ ಕೈಗೊಂಡಿದ್ದರೆಂದು ತಿಳಿದು ಬಂದಿದೆ.

ಸ್ಥಳಕ್ಕೆ ಚಿತ್ತೂರು ಡಿವೈಎಸ್‌ಪಿ ಸೇರಿದಂತೆ ಬಂಗಾರುಪಾಳ್ಯಂ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಾಸಿಕೊಂಡಿದ್ದಾರೆ.

No Comments

Leave A Comment