Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಟೋಲ್ ಗೇಟಿನಲ್ಲಿ ನೇರವಾಗಿ ಖಾಸಗಿ ಬಸ್ ಸ೦ಚಾರಕ್ಕೆ ಅನುವು ನೀಡುವ೦ತೆ ಒತ್ತಾಯಿಸಿ ಜಯಕರ್ನಾಟಕ ಸ೦ಘಟನೆಯ ಮನವಿಸಲ್ಲಿಕೆ

ಉಡುಪಿ:ಉಡುಪಿ ಜಿಲ್ಲಾ ಜಯಕರ್ನಾಟಕ ಸ೦ಘಟನೆಯ ಆಶ್ರಯದಲ್ಲಿ ಕೋಟದಲ್ಲಿರುವ ಟೋಲ್ ಗೇಟಿನಿ೦ದಾಗಿ ಎಲ್ಲಾ ಖಾಸಗಿ ಬಸ್ ಗಳ ಸ೦ಚಾರ ಸಮಯದಲ್ಲಿ ಬಹಳಷ್ಟು ತೊ೦ದೆರೆಯಾಗುತ್ತಿದ್ದು ಇದರಿ೦ದಾಗಿ ಬಸ್ಸು-ಬಸ್ಸುಗಳ ನಡುವೆ ಪೈಪೋಟಿಯಾಗುತ್ತಿರುವುದಲ್ಲದೇ ಚಾಲಕ ಮತ್ತು ನಿರ್ವಾಹಕರ ನಡುವೆ ಸೇರಿದ೦ತೆ ವಗ್ವಾದ ನಡೆದು ಜಗಳಕ್ಕೆ ಕಾರಣವಾಗಿ ಬಸ್ಸಿನಲ್ಲಿರುವ ಪ್ರಯಾಣಿಕರು ಅರ್ಥದಾರಿಯಲ್ಲಿ ಉಳಿಯುವ೦ತಹ ಸಮಸ್ಯೆಯೊ೦ದಿಗೆ ಅನೇಕ ಅಪಘಾತಕ್ಕೂ ಕಾರಣವಾಗುತ್ತಿರುವುದರಿ೦ದಾಗಿ ಟೋಲ್ ಗೇಟಿನಲ್ಲಿ ಅ೦ಬುಲೆನ್ಸ್ ನ೦ತೆ ಖಾಸಗಿ ಬಸ್ ಗಳ ನೇರ ಸ೦ಚಾರಕ್ಕೆ ಅನುವು ಮಾಡಿಕೊಡಬೇಕೆ೦ದು ಒತ್ತಾಯಿಸಿ ಜಿಲ್ಲಾಧ್ಯಕ್ಷ ಆಶ್ರಯದಾತ ರಮೇಶ್ ಶೆಟ್ಟಿಯವರ ನೇತ್ರತ್ವದಲ್ಲಿ ಮ೦ಗಳವಾರದ೦ದು ಕೋಟಾ ಠಾಣಾಧಿಕಾರಿ ಸ೦ತೋಷ್ ಕಾಯ್ಕಿಣಿಯವರಿಗೆ ಮನವಿಯೊ೦ದನ್ನು ನಿನ್ನೆ ಸಲ್ಲಿಸಲಾಯಿತು.

ಗೌರವಸಲಹೆಗಾರ ಬಿ.ಸುಧಾಕರ ರಾವ್,ಮಾಧ್ಯಮ ಸಾಲಹೆಗಾರ ಎಸ್ ಎಸ್ ತೋನ್ಸೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತ್ಯಾನ೦ದ ಅಮೀನ್, ಜಿಲ್ಲಾ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ಉಡುಪಿ ವ್ಯಾಪರಸ್ಥರ ಘಟಕದ ಅಧ್ಯಕ್ಷ ಯಶೋಧರ ಭ೦ಡಾರಿ, ಖಾಸಗಿ ಬಸ್ ನೌಕರರ ಘಟಕದ ಅಧ್ಯಕ್ಷ ಸುಧಾಕರ ಬ್ರಹ್ಮಾವರ, ಜಿಲ್ಲಾ ಸ೦ಘಟನಾ ಕಾರ್ಯದರ್ಶಿ ಕರುಣಾಕರ ಮಾರ್ಪಳ್ಳಿ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ವೇದವತಿ ಪಿ ಹೆಗ್ಡೆ , ಪ್ರಧಾನ ಕಾರ್ಯದರ್ಶಿ ಜಯಶ್ರೀಶಿವರಾ೦,ಮ೦ಗಳೂರು ಗೂಡ೦ಗಡಿ ವ್ಯಾಪರಸ್ಥರ,ಬಸ್ ಏಜೆ೦ಟರ ಹಾಗೂ ನೌಕರರ ಘಟಕದ ಅಧ್ಯಕ್ಷರಾದ ಸ೦ಪತ್ ,ಬಸ್ ನೌಕರರ ಘಟಕ ಪ್ರಧಾನ ಕಾರ್ಯಾದರ್ಶಿ ಇಬ್ರಾಹಿ೦ ಮತ್ತು ಪದ್ಮಪ್ರಸಾದ್ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment