Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

ಅಂತರ್ಜಲ ಮಟ್ಟ ಕುಸಿತ: ರಾಜ್ಯಕ್ಕೆ 4ನೇ ಸ್ಥಾನ ಪಾತಾಳ ತಲುಪಿದ ನೀರು

ನವದೆಹಲಿ: ದೇಶದಾದ್ಯಂತ ಅಂತರ್ಜಲ ಮಟ್ಟವು ತೀವ್ರ ಪ್ರಮಾಣ ದಲ್ಲಿ ಕುಸಿಯುತ್ತಿದ್ದು, ಅತ್ಯಂತ ಕೆಳಮಟ್ಟ ತಲುಪಿರುವ ವಿವಿಧ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ.

ಈ ಕುರಿತು ಸಮೀಕ್ಷೆ ನಡೆಸಿರುವ ಕೇಂದ್ರದ ಜಲಸಂಪನ್ಮೂಲ ಸಚಿವಾ ಲಯವು, ಕಳೆದ ಶನಿವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಸಮೀಕ್ಷೆಯ ವರದಿಯ ಪ್ರಕಾರ, ರಾಜ್ಯದಲ್ಲಿ 70 ಮೀಟರ್‌ಗಿಂತಲೂ ಅಧಿಕ ಆಳದಲ್ಲಿ ಕೊರೆದಿರುವ 1.18 ಲಕ್ಷ ಕೊಳವೆ ಬಾವಿಗಳು ಪತ್ತೆಯಾಗಿದೆ.

ಈ ಕೊಳವೆ ಬಾವಿಗಳನ್ನು ಕರ್ನಾಟಕದ ಕೋಲಾರ, ಚಾಮರಾಜ ನಗರ, ಚಿತ್ರದುರ್ಗ, ಬೆಂಗಳೂರು ಗ್ರಾಮೀಣ, ತುಮಕೂರು, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪತ್ತೆ ಮಾಡಲಾಗಿದೆ.

ರಾಜ್ಯದಲ್ಲಿ ಒಟ್ಟು 2.85 ಲಕ್ಷ ಹೆಕ್ಟೇರ್‌ ಪ್ರದೇಶವು ಕೊಳವೆ ಬಾವಿಯ ನೆರವಿನಿಂದ ನೀರಾವರಿ ಸೌಲಭ್ಯ ಹೊಂದಿದೆ. ಆ ಪೈಕಿ 1.32 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಬೆಳೆ ಬೆಳೆಯಲಾಗುತ್ತಿದೆ. 50,561 ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರು ಹಂಗಾ ಮಿನ ಬೆಳೆ ಬೆಳೆಯಲಾಗುತ್ತಿದ್ದರೆ, 8,556 ಹೆಕ್ಟೆರ್‌ ಪ್ರದೇಶದಲ್ಲಿ ಎರಡೂ ಬೆಳೆ ಬೆಳೆಯಲಾಗುತ್ತಿದೆ.

ನೀರಾವರಿ ಸೌಲಭ್ಯಕ್ಕಾಗಿ ಅಂತರ್ಜಲ ಆಶ್ರಯಿಸಿರುವ ಶೇ 98ರಷ್ಟು ಕೊಳವೆ ಬಾವಿಗಳನ್ನು ರೈತರು ವೈಯಕ್ತಿಕವಾಗಿ ಕೊರೆಯಿಸಿಕೊಂಡಿದ್ದು, ಈ ಪೈಕಿ ಒಂದು ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ಹಿಡುವಳಿದಾರರೇ ಶೇ 45ರಷ್ಟಿದ್ದಾರೆ.

ಶೇ 10ಕ್ಕೂ ಕಡಿಮೆ ರೈತರು ಸಹಕಾರಿ ತತ್ವದಡಿ, ಗುಂಪಾಗಿ ಕೊಳವೆ ಬಾವಿಗಳನ್ನು ತೋಡಿಸಿರುವುದು ಕಂಡು ಬಂದಿದೆ ಎಂದು ಸಣ್ಣ ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2013–14ನೇ ಸಾಲಿನಿಂದಲೇ ಆರಂಭಿಸಿದ ಸಮೀಕ್ಷೆಯನ್ನು ಆಧರಿಸಿ ಈ ವರದಿಯಲ್ಲಿ ವಿವರಿಸಲಾಗಿದೆ.

ಕರ್ನಾಟಕ, ಪಂಜಾಬ್‌, ರಾಜ ಸ್ಥಾನ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಹರಿಯಾಣ, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿನ ಒಟ್ಟು 1.26 ಕೋಟಿ ಹೆಕ್ಟೆರ್‌ ಪ್ರದೇಶದಲ್ಲಿ ಕೊಳವೆ ಬಾವಿ ನೆರವಿನೊಂದಿಗೆ ನೀರಾವರಿ ಸೌಲಭ್ಯ ಪಡೆಯಲಾಗುತ್ತಿದೆ. ಬಹುತೇಕ ಕೊಳವೆ ಬಾವಿಗಳನ್ನು ರೈತರು ವೈಯಕ್ತಿಕವಾಗಿಯೇ ಕೊರೆಯಿಸಿಕೊಂಡಿದ್ದಾರೆ.

ಜಲಾಶಯ, ದೊಡ್ಡ ಪ್ರಮಾಣದ ಕೆರೆಯಂತಹ ಜಲ ಮೂಲಗಳಿಂದ ಒದಗಿಸಲಾಗುವ ಸಾಮಾನ್ಯ ನೀರಾವರಿ ಯೋಜನೆಯ ಸೌಲಭ್ಯ ದೊರೆಯದ್ದರಿಂದಲೇ, ರೈತರು ಸಣ್ಣ ನೀರಾವರಿ ಅಗತ್ಯಗಳನ್ನು ಪೂರೈಸಲು ಅಂತರ್ಜಲ ಅವಲಂಬಿಸುವಂತಾಗಿದೆ. ಈ ಅವಲಂಬನೆಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ, ಮಳೆ ನೀರನ್ನು ಸಂಗ್ರಹಿಸಿ ಒದಗಿಸಲಾಗುವ ನೀರಾವರಿ, ಸಣ್ಣ ನೀರಾವರಿ ಹಾಗೂ ಕಿರು ನೀರಾವರಿ ಯೋಜನೆಗಳ ಯಶಸ್ಸಿಗೆ ಶ್ರಮಿಸುವುದು ಅನಿವಾರ್ಯವಾಗಿದೆ ಎಂದು ಸಮೀಕ್ಷಾ ವರದಿ ಅಭಿಪ್ರಾಯಪಟ್ಟಿದೆ.

ರಾಜಸ್ಥಾನ (ಮೊದಲ ಸ್ಥಾನ)

150 ಮೀಟರ್‌ಗಿಂತ ಹೆಚ್ಚು ಆಳ

1.06 ಲಕ್ಷ ಕೊಳವೆ ಬಾವಿ

ಆಂಧ್ರ ಪ್ರದೇಶ(ಎರಡು)

(91,652)

ತಮಿಳುನಾಡು ( ಮೂರನೇ ಸ್ಥಾನ)

(61,984)

ಕರ್ನಾಟಕ (4ನೇ ಸ್ಥಾನ)

40,186 ಕೊಳವೆ ಬಾವಿ

ಅಂತರ್ಜಲ ಕುಸಿದಿರುವ ರಾಜ್ಯಗಳು (150 ಮೀಟರ್‌ ಆಳದ ಕೊಳವೆ ಬಾವಿಗಳ ಸಂಖ್ಯೆ)
ರಾಜಸ್ಥಾನ (1,06,002)
ಆಂಧ್ರಪ್ರದೇಶ (91,652)
ತಮಿಳುನಾಡು (61,984)
ಕರ್ನಾಟಕ (40,186)
ಹರಿಯಾಣ (19,766)
ಗುಜರಾತ್‌ (16,295)
ಮಧ್ಯಪ್ರದೇಶ (15,908)
ಪಂಜಾಬ್‌ (14,410)
ಉತ್ತರ ಪ್ರದೇಶ (13,848)
ಛತ್ತೀಸ್‌ಗಡ(7,040)

No Comments

Leave A Comment