Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಕುಖ್ಯಾತ ಕ್ರಿಮಿನಲ್ ಸೋನು ಪುಂಜಬಾನ್ ಬಂಧನ

ನವದೆಹಲಿ: ಹದಿ ಹರೆಯದ ಹುಡುಗಿಯರನ್ನು ಅಪಹರಿಸಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಕುಖ್ಯಾತ ಕ್ರಿಮಿನಲ್ ಗೀತಾ ಆರೋರ ಅಲಿಯಾಸ್ ಸೋನು ಪುಂಜಬಾನ್ ಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಆರು ತಿಂಗಳ ಕಾಲ ಬೆನ್ನಟ್ಟಿದ್ದ ದೆಹಲಿ ಪೊಲೀಸರು ಕೊನೆಗೂ ಸೋನು ಪುಂಜಬಾನ್ ಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಶನಿವಾರವೇ ಆಕೆಯನ್ನು ಬಂಧಿಸಿದ್ದು ಎಸಿಪಿ ಸಂದೀಪ್ ಲಾಂಬಾ ನೇತೃತ್ವದ ತಂಡ ಕ್ರೈಂ ಬ್ರಾಂಚ್ ಸೈಬರ್ ಸೆಲ್ ಕಚೇರಿಯಲ್ಲಿ ಪ್ರಶ್ನಿಸುತ್ತಿದೆ.

16ರ ಹರೆಯದ ಬಲವಂತದ ವೇಶ್ಯೆಗಾರಿಕೆಯ ಸಂತ್ರಸ್ತ ಯುವತಿಯೊಬ್ಬಳು ಕೊಟ್ಟ ಮಾಹಿತಿಯನ್ನು ಅನುಸರಿಸಿ ನೋನು ಪುಂಜಬಾನ್ ಳ ರಹಸ್ಯ ಅಡಗುದಾಣವನ್ನು ಪತ್ತೆ ಹಚ್ಚಿ ಆಕೆಯನ್ನು ಸೆರೆ ಹಿಡಿಯಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮೊದಲಿಗೆ ಸಂತ್ರಸ್ತ ಯುವತಿ ಕೊಟ್ಟ ದೂರಿಗೆ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣ ತನ್ನನ್ನು ಕೊಲ್ಲಬಹುದು ಎಂಬ ಭೀತಿಯಲ್ಲಿ ಯುವತಿಯೂ ಭೂಗತಳಾಗಿದ್ದಳು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಎಸಿಪಿ ಲಾಂಬಾ ಅವರು ಕಳೆದ ನವೆಂಬರ್ ತಿಂಗಳಲ್ಲಿ ಸಂತ್ರಸ್ತ ಯುವತಿಯನ್ನು ಪತ್ತೆ ಹಚ್ಚಿ ಆಕೆಯಿಂದ ಹಲವು ರಹಸ್ಯ ಮಾಹಿತಿಗಳನ್ನು ಪಡೆದುಕೊಂಡು ನಂತರ ಕಾರ್ಯಾಚರಣೆ ನಡೆಸಿದ್ದರು.

2009ರಲ್ಲಿ ಸಂತ್ರಸ್ತ ಯುವತಿ 12 ವರ್ಷದವಳಾಗಿದ್ದಾಗ ಆಕೆಯನ್ನು ಅಪಹರಿಸಿ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು. ನಂತರ ಆಕೆ 2014ರಲ್ಲಿ ತಪ್ಪಿಸಿಕೊಂಡು ಬಂದು ನಜಫ್ಗಡ ಪೊಲೀಸ್ ಠಾಣೆಯಲ್ಲಿ ಸೋನು ಪುಂಜಭಾನ್ ಹಾಗೂ ಆಕೆಯ ದಲ್ಲಾಳಿಗಳ ವಿರುದ್ಧ ದೂರು ನೀಡಿದ್ದಳು.

No Comments

Leave A Comment