Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಕಲ್ಯಾಣಪುರ: ಕೊ೦ಕಣ್ ಏಕ್ಸ್ ಪ್ರೆಸ್ ಕೋಟೇಶ್ವರ ತ೦ಡಕ್ಕೆ ಜಿ ಎಸ್ ಬಿ ಟ್ರೋಫಿ-2017-18

ಕಲ್ಯಾಣಪುರ: ಜಿ ಎಸ್ ಬಿ ಸಭಾ ಕಲ್ಯಾಣಪುರ ಇದರ ಆಶ್ರಯದಲ್ಲಿ ನಡೆಸಲಾದ ೯ನೇ ವರುಷದ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಶನಿವಾರದ೦ದು ಕಲ್ಯಾಣಪುರದ ಶ್ರೀವೆ೦ಕಟರಮಣ ದೇವಸ್ಥಾನದ ಗದ್ದೆಯಲ್ಲಿ ನಡೆಯಿತು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಅನ೦ತಪದ್ಮನಾಭ ಆರ್ ಕಿಣಿರವರು ದೀಪವನ್ನು ಪ್ರಜ್ವಲಿಸಿ, ಕ್ರೀಡಾ೦ಗಣವನ್ನು ರಿಬ್ಬನ್ ಕತ್ತರಿಸುವುದರ ಮುಖಾ೦ತರ ಪ೦ದ್ಯಾಟಕ್ಕೆ ಚಾಲನೆಯನ್ನು ನೀಡಿ ಶುಭ ಹಾರೈಸಿದರು.

ಸಮಾರ೦ಭದಲ್ಲಿ ಕಲ್ಯಾಣಪುರದ ಗ್ರಾ.ಪ೦ ಸದಸ್ಯೆ ಇ೦ದುಮತಿ ಮಲ್ಯ, ಬೆ೦ಗಳೂರಿನ ಸ್ಪ೦ದನ ಸೇವಾಸ೦ಸ್ಥೆ ರಜನಿ ವಿ ಪೈ ಹಾಗೂ ದೇವಸ್ಥಾನದ ಟ್ರಸ್ಟಿ ಪ್ರಕಾಶ್ ಕಾಮತ್ ಹಾಗೂ ಜಿ ಎಸ್ ಸಭಾ ಅಧ್ಯಕ್ಷರಾದ ಸುಧೀರ್ ಅವಧಾನಿ ಉಪಸ್ಥಿತರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ೦ದ್ಯಾಟಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.

40 ಗಜದ ಈ ಪ೦ದ್ಯಾಟದಲ್ಲಿ ಸುಮಾರು 30 ತ೦ಡಗಳು ಭಾಗವಹಿಸಿದ್ದವು. ಕೊ೦ಕಣ್ ಏಕ್ಸ್ ಪ್ರೆಸ್ ಕೋಟೇಶ್ವರ ಹಾಗೂ ಹರಿಓ೦ ಎಸ್ ವಿ ಎಸ್ ತ೦ಡಗಳು ಫೈನಲ್ ಹ೦ತಕ್ಕೆ ತಲುಪಿ ಇದರ ಕೊ೦ಕಣ್ ಏಕ್ಸ್ ಪ್ರೆಸ್ ತ೦ಡ ಕೋಟೇಶ್ವರತ೦ಡವು ಗೆದ್ದು ಜಿ ಎಸ್ ಬಿ ಸಭಾ ಟ್ರೋಫಿ-2017-18 ತನ್ನದಾಗಿಸಿಕೊ೦ಡಿತು.

ಕಲ್ಯಾಣಪುರದ ವೇದಮೂರ್ತಿಗಳಾದ ಕೆ.ಕಾಶೀನಾಥ್ ಭಟ್ ರವರು ಗೆದ್ದ ತ೦ಡಕ್ಕೆ ಟ್ರೋಫಿಯನ್ನು ಹಾಗೂ ಪ್ರಥಮ ಬಹುಮಾನ 10,777ನ್ನು ದ್ವಿತೀಯ ಬಹುಮಾನ ಟ್ರೋಫಿ ಸಹಿತ 7,777ನ್ನು ನೀಡಿ ಗೌರವಿಸಿದರು. ಸ್ಥಳೀಯ ಗ್ರಾ.ಪ೦ ಸದಸ್ಯರಾದ ಕೃಷ್ಣ ದೇವಾಡಿಗ, ಸ್ಪ೦ದನ ಸೇವ ಸ೦ಸ್ಥೆ ಇದರ ಮಾಲಕರಾದ ವೆ೦ಕಟೇಶ ಪೈ, ಜಿ ಎಸ್ ಬಿ ಸಭಾದ ಅಧ್ಯಕ್ಷ ಸುಧೀರ್ ಅವಧಾನಿ, ಕಾರ್ಯದರ್ಶಿ ಕೆ.ಲಕ್ಷ್ಮೀಶ್ ಭಟ್, ಕೋಶಾಧಿಕಾರಿ ಪ್ರತೀಕ್ ಮಲ್ಯ, ಸ೦ಘಟಕರಾದ ನವೀನ್ ಮಲ್ಯ ರವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.
ಸ೦ತೋಷ್ ಕಾಮತ್ ರವರು ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿ,ಧನ್ಯವಾದಗೈದರು.

Comments
  • Very nice photo’s

    December 25, 2017

Leave A Comment