Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಕೋಲ್ಕತಾ ಜೈಲಿಂದ ನ್ಯಾ.ಕರ್ಣನ್‌ ಬಿಡುಗಡೆ

ಕೋಲ್ಕತಾ: ಸುಪ್ರೀಂಕೋರ್ಟ್‌ನಿಂದ ನ್ಯಾಯಾಂಗ ನಿಂದನೆ ಶಿಕ್ಷೆಗೆ ಗುರಿಯಾಗಿ 6 ತಿಂಗಳ ಜೈಲು ವಾಸ ಅನುಭವಿಸಿದ ನ್ಯಾ.ಸಿ.ಎಸ್‌.ಕರ್ಣನ್‌ ಬಿಡುಗಡೆಯಾಗಿದ್ದಾರೆ. ಅವರ ಜತೆಗೆ ಪತ್ನಿ ಸರಸ್ವತಿ ಕರ್ಣನ್‌ ಮತ್ತು ಹಿರಿಯ ಪುತ್ರ ಜತೆಗಿದ್ದರು. ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರಸಿಡೆನ್ಸಿ ಕಾರಾಗೃಹದಿಂದ ಬಿಡುಗಡೆಯಾದರು.

ಸುಪ್ರೀಂಕೋರ್ಟ್‌ನಿಂದ ಮೇ ತಿಂಗಳಲ್ಲಿ ಶಿಕ್ಷೆ ಘೋಷಣೆಯಾದ ಬಳಿಕ ಅವರು ಒಂದು ತಿಂಗಳ ಕಾಲ ನಾಪತ್ತೆಯಾಗಿದ್ದರು. ಅವರನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಜೂ.20ರಂದು ಬಂಧಿಸಲಾಗಿತ್ತು. ಗಮನಾರ್ಹ ಅಂಶವೆಂದರೆ ಶೀಘ್ರವೇ ಅವರ ವಿವಾದಿತ ತೀರ್ಪುಗಳನ್ನು ಒಳಗೊಂಡ ಪುಸ್ತಕ ಬಿಡುಗಡೆಯಾಗಲಿದೆ.

No Comments

Leave A Comment