Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ISIನಿಂದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಛೋಟಾ ಶಕೀಲ್ ಫಿನಿಶ್?

ನವದೆಹಲಿ:ಮುಂಬೈ ಸರಣಿ ಸ್ಫೋಟದ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ, ಬಲಗೈ ಬಂಟ ಛೋಟಾ ಶಕೀಲ್(ಪೂರ್ಣ ಹೆಸರು: ಮೊಹಮ್ಮದ್ ಶಕೀಲ್ ಬಾಬು ಮಿಯಾನ್ ಶೇಕ್)ನನ್ನು ಹತ್ಯೆಗೈಯಲಾಗಿದೆ ಎಂಬ ಸುದ್ದಿ ಹರಿದಾಡತೊಡಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಶಕೀಲ್ ಗ್ಯಾಂಗ್, ಬಿಲಾಲ್ ಹಾಗೂ ಮುಂಬೈ ಮೂಲದ ಶಕೀಲ್ ಸಂಬಂಧಿಯೊಬ್ಬರು ಶಕೀಲ್ ಸಾವಿನ ಕುರಿತು ನಡೆಸಿದ ಆಡಿಯೋ ತುಣಕಿನ ಜಾಡನ್ನು ಹಿಡಿದು ಮಾಹಿತಿ ಕಲೆ ಹಾಕಿರುವುದಾಗಿ ಹೇಳಿದೆ.

ಆದರೆ ಆಡಿಯೋ ಕ್ಲಿಪ್ ನ ಸತ್ಯಾಸತ್ಯತೆ ಬಗ್ಗೆ ಇನ್ನಷ್ಟೇ ನಿಖರ ಮಾಹಿತಿ ಬರಬೇಕಾಗಿದೆ. ಮತ್ತೊಂದೆಡೆ ಛೋಟಾ ಶಕೀಲ್ ಸಾವಿನ ಸುದ್ದಿಯನ್ನು ಖಚಿತಪಡಿಸುವುದಾಗಲಿ, ಅಲ್ಲಗಳೆಯುವುದಾಗಿ ಭಾರತದ ರಾಷ್ಟ್ರೀಯ ಭದ್ರತಾ ದಳದ ಸಚಿವಾಲಯವಾಗಲಿ ಮತ್ತು ಮುಂಬೈ ಪೊಲೀಸ್ ಆಗಲಿ ಮಾಡಿಲ್ಲ.

ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, 57ವರ್ಷದ ಶಕೀಲ್ ಜನವರಿ 6ರಂದು ಇಸ್ಲಾಮಾಬಾದ್ ನಲ್ಲಿ ನಡೆದ ಮಾಫಿಯಾ ಸಂಘಟನೆಗಳ ಸಭೆಗೆ ಹಾಜರಾಗಿದ್ದ. ಈ ಸಂದರ್ಭದಲ್ಲಿ ಆತನಿಗೆ ಹೃದಯಾಘಾತವಾಗಿತ್ತು.

ಕೂಡಲೇ ಆತನ ಅಂಗರಕ್ಷಕರು ಆತನನ್ನು ವಿಮಾನದಲ್ಲಿ ರಾವಲ್ಪಿಂಡಿಯಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದರು. ಆದರೆ ದಾರಿಮಧ್ಯೆಯೇ ಶಕೀಲ್ ಕೊನೆಯುಸಿರೆಳೆದಿದ್ದ ಎಂದು ತಿಳಿಸಿದೆ.

ಮತ್ತೊಂದು ವರದಿ ಪ್ರಕಾರ, ಪಾಕಿಸ್ತಾನದ ಐಎಸ್ಐ ಶಕೀಲ್ ನನ್ನು ಮಾಫಿಯಾವನ್ನೇ ಬಳಸಿ ಹತ್ಯೆಗೈದಿದೆ. ಶಕೀಲ್ ಜತೆ ಡೀಲ್ ತುಂಬಾ ತೊಂದರೆಯಾಗಿ ಪರಿಣಮಿಸಿರುವುದಕ್ಕೆ ಐಎಸ್ಐ ಈ ತೀರ್ಮಾನ ತೆಗೆದುಕೊಂಡಿದೆ ಎಂದು ವಿವರಿಸಿದೆ.

ಘಟನೆ ನಡೆದ 2 ದಿನಗಳ ಬಳಿಕ ಶಕೀಲ್ ಹತ್ಯೆ ವಿಚಾರವನ್ನು ಪಾತಕಿ ದಾವೂದ್ ಗೆ ತಿಳಿಸಲಾಗಿತ್ತಂತೆ. ಈ ಸುದ್ದಿ ಕೇಳಿದ ನಂತರ ದಾವೂದ್ ತುಂಬಾ ಆಘಾತಕ್ಕೊಳಗಾಗಿ ಆತನನ್ನೂ ಕೂಡಾ ಜನವರಿ ಅಂತ್ಯದಲ್ಲಿ ಮತ್ತು ಮಾರ್ಚ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿ ಹೇಳಿದೆ.

No Comments

Leave A Comment