Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್: ಚಿನ್ನ ಗೆದ್ದ ಭಾರತದ ಸುಶೀಲ್ ಕುಮಾರ್, ಸಾಕ್ಷಿ ಮಲ್ಲಿಕ್

ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಜೋಹನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಇದೀಗ ಭಾರತದ ಕುಸ್ತಿ ಪಟುಗಳಾದ ಸಾಕ್ಷಿ ಮಲ್ಲಿಕ್ ಹಾಗೂ ಸುಶೀಲ್ ಕುಮಾರ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಭಾನುವಾರ ನಡೆದ ಪುರುಷರ ವಿಭಾಗದ 74 ಕೆ.ಜಿ. ಫ್ರೀಸ್ಟೈಲ್​ ವಿಭಾಗದ ಫೈನಲ್​ನಲ್ಲಿ ಸುಶೀಲ್​ ಕುಮಾರ್​ ನ್ಯೂಜಿಲೆಂಡ್​ನ ಆಕಾಶ್​ ಖುಲ್ಲರ್​ ಅವರನ್ನು ಸೋಲಿಸಿದರು. ಅಂತೆಯೇ ಮಹಿಳೆಯರ ವಿಭಾಗದಲ್ಲಿ ರಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾಕ್ಷಿ ಮಲಿಕ್​ 62 ಕೆ.ಜಿ ವಿಭಾಗದ ಫೈನಲ್​ನಲ್ಲಿ ನ್ಯೂಜಿಲೆಂಡ್​ನ ತಾಯಲಾ ತುಹಾನೆ ಫೋರ್ಡ್​ ಅವರನ್ನು 13-2 ಅಂತರದಿಂದ ಸೋಲಿಸುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡರು.

ಇನ್ನು ಟೂರ್ನಿಯಲ್ಲಿ ಭಾರತೀಯ ಕ್ರೀಡಾ ಪಟುಗಳ ಪದಕ ಬೇಟೆ ಮುಂದುವರೆದಿದ್ದು, ಶನಿವಾರವಷ್ಟೇ ಭಾರತೀಯ ಮಹಿಳಾ ಕುಸ್ತಿ ಪಟುಗಳು ಒಟ್ಟು 9 ಚಿನ್ನ ಮತ್ತು 7 ಬೆಳ್ಳಿ ಪದಕ ಜಯಿಸಿದ್ದರು. ನಿನ್ನೆ ಸಾಕ್ಷಿ ಮಲ್ಲಿಕ್ ಮತ್ತು ಸುಶೀಲ್ ಕುಮಾರ್ ಚಿನ್ನದ ಪದಕ ಗಳಿಸುವ ಮೂಲಕ ಭಾರತದ ಪದಕಗಳಿಕೆಯನ್ನು 59ಕ್ಕೆ ಏರಿಕೆ ಮಾಡಿದ್ದಾರೆ ಈ ಪೈಕಿ ಭಾರತ ಟೂರ್ನಿಯಲ್ಲಿ ಒಟ್ಟು 29 ಚಿನ್ನ, 24 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಜಯಿಸಿದಂತಾಗಿದೆ.

No Comments

Leave A Comment