Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಆಸ್ಟ್ರೇಲಿಯನ್‌ ಓಪನ್‌ಗೆ ಸಾನಿಯಾ ಮಿರ್ಜಾ ಇಲ್ಲ

ಹೊಸದಿಲ್ಲಿ: ಬಲ ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಭಾರತೀಯ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದಲ್ಲಿ ಆಡುವುದಿಲ್ಲ.

ಮೊಣಕಾಲಿನ ನೋವು ತೀವ್ರವಾಗಿದೆ. ನೇರವಾಗಿ ನಡೆದುಕೊಂಡು ಹೋಗಲು ತೊಂದರೆಯಿಲ್ಲ. ಆದರೆ ಆಡುವಾಗ ದಿಕ್ಕು ಬದಲಿಸುವ ವೇಳೆ ನೋವು ತೀವ್ರಗೊಳ್ಳುತ್ತದೆ. ಇದು ಬಲುದೊಡ್ಡ ಸಮಸ್ಯೆ. ಹಾಗಾಗಿ ಆಸ್ಟ್ರೇಲಿಯನ್‌ ಓಪನ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ ಎಂದು 31ರ ಹರೆಯದ ಸಾನಿಯಾ ಹೇಳಿದ್ದಾರೆ. ಈ ಸಮಸ್ಯೆಯ ಬಗ್ಗೆ ವೈದ್ಯರ ಸಲಹೆ ಕೇಳಿದಾಗ ಕೆಲವು ತಿಂಗಳು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಆಬಳಿಕ ಶಸ್ತ್ರಚಿಕಿತ್ಸೆ ಅಥವಾ ಮದ್ದಿನ ಮೂಲಕ ಗುಣಪಡಿಸುವ ಕುರಿತು ಆಲೋಚಿಸುವ ಎಂದು ವೈದ್ಯರು ಹೇಳಿದ್ದಾರೆಂದು ಸಾನಿಯಾ ನುಡಿದರು.

ಮುಂದಿನ ವರ್ಷ ನಡೆಯುವ ಕಾಮನ್‌ವೆಲ್ತ್‌ ಗೇಮ್ಸ್‌ (ಎಪ್ರಿಲ್‌ 4ರಿಂದ 15) ಮತ್ತು ಏಶ್ಯನ್‌ ಗೇಮ್ಸ್‌ (ಆ. 18-ಸೆ. 2) ನಲ್ಲಿ ಭಾಗವಹಿಸುವ ಭರವಸೆಯಿದೆ ಎಂದು ಸಾನಿಯಾ ತಿಳಿಸಿದರು.

No Comments

Leave A Comment