Log In
BREAKING NEWS >
ಉಡುಪಿ:ಪಲಿಮಾರು ಮಠಾಧೀಶರ ಪರ್ಯಾಯ ಪೀಠಾರೋಹಣಕ್ಕೆ ಕ್ಷಣಗಣನೆ...ರಥಬೀದಿಯಲ್ಲಿ ಭಜನಾ ತ೦ಡಗಳಿ೦ದ ಮುಗಿಲುಮುಟ್ಟಿದ ಭಜನೆ...ಬೃಹತ್ ಜನಸ್ತೋಮ

ಧವನ್‌ ಶತಕದ ಅಬ್ಬರ : ಭಾರತಕ್ಕೆ ಏಕದಿನ ಸರಣಿ

ವಿಶಾಖಪಟ್ಟಣ: ಪ್ರವಾಸಿ ಶ್ರೀಲಂಕಾ ಎದುರಿನ ಮೂರನೇ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದ ಟೀಂ ಇಂಡಿಯಾವು ಈ ಮೂಲಕ ಸರಣಿ ಗೆಲುವಿನ ಸಾಧನೆಯನ್ನು ಮಾಡಿದೆ. ಧರ್ಮಶಾಲಾದಲ್ಲಿ ಬ್ಯಾಟಿಂಗ್‌ ಕುಸಿತಕ್ಕೊಳಗಾಗಿ ಲಂಕನ್ನರ ವಿರುದ್ಧ ಹೀನಾಯವಾಗಿ ಸೋತಿದ್ದ ರೋಹಿತ್‌ ಪಡೆ ಬಳಿಕ ಮೊಹಾಲಿಯಲ್ಲಿ ಭರ್ಜರಿಯಾಗಿ ತಿರುಗಿಬಿದ್ದು ನಾಯಕ ರೋಹಿತ್‌ ಶರ್ಮಾ ಅವರ ದ್ವಿಶತಕ ಸಾಧನೆಯ ಮೂಲಕ ಬೃಹತ್‌ ಗೆಲುವನ್ನು ತನ್ನದಾಗಿಸಿಕೊಂಡಿತ್ತು ಮಾತ್ರವಲ್ಲದೇ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಸಮಬಲಕ್ಕೆ ತಂದುಕೊಂಡಿತ್ತು.

ಹಾಗಾಗಿ ವಿಶಾಖಪಟ್ಟಣದ ಸಂಡೇ ಸ್ಪೆಷಲ್‌ ಒನ್‌ ಡೇ ಮ್ಯಾಚ್‌ ಫೈನಲ್‌ ಸ್ವರೂಪವನ್ನು ಪಡೆದುಕೊಂಡಿತ್ತು. ಈ ಆಹರ್ನಿಶಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ತಂಡವು ಉಪುಲ್‌ ತರಂಗ ಬಾರಿಸಿದ ಬಿರುಸಿನ 95 ರನ್ನುಗಳ ನೆರವಿನಿಂದ ನಿಗದಿತ 50 ಓವರುಗಳಲ್ಲಿ 215 ರನ್ನುಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು. ತರಂಗ (95), ಸಮರವಿಕ್ರಮ (42) ಹೊರತುಪಡಿಸಿದರೆ ಬೇರಿನ್ಯಾವ ಲಂಕಾ ಆಟಗಾರರಿಂದ ಹೋರಾಟ ಕಂಡುಬರಲಿಲ್ಲ. ಭಾರತದ ಪರ ಕುಲದೀಪ್‌ ಯಾದವ್‌ ಹಾಗೂ ಚಾಹಲ್‌ 3 ವಿಕೆಟ್‌ ಪಡೆದು ಮಿಂಚಿದರೆ, ಹಾರ್ಧಿಕ್‌ ಪಾಂಡ್ಯ 2 ವಿಕೆಟ್‌ ಪಡೆದರು.

ಶ್ರೀಲಂಕಾದ ಸಾಧಾರಣ ಮೊತ್ತವನ್ನು ವಿಶ್ವಾಸದಿಂದ ಬೆನ್ನಟ್ಟಿದ ಭಾರತಕ್ಕೆ ಶಿಖರ್‌ ಧವನ್‌ (100) ಹಾಗೂ ಶ್ರೇಯಸ್‌ ಅಯ್ಯರ್‌ (65) ಬ್ಯಾಟಿಂಗ್‌ ಬಲ ತುಂಬಿದರು. ನಾಯಕ ರೋಹಿತ ಶರ್ಮಾ (7) ಬೇಗನೇ ನಿರ್ಗಮಿಸಿದರೂ ಧವನ್‌ ಮತ್ತು ಅಯ್ಯರ್‌ ಬಿರುಸಿನ ಆಟವಾಡುತ್ತಾ ತಂಡದ ಗೆಲುವಿನ ಸಾಧ್ಯತೆಯನ್ನು ಶೀಘ್ರಗೊಳಿಸದರು. ಅದರಲ್ಲೂ ಶಿಖರ್‌ ಧವನ್‌ ಅವರು ಪಂದ್ಯದ ಅಂತಿಮ ಹಂತದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದರು ಅವರು 13 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 85 ಚೆಂಡುಗಳಲ್ಲಿ 100 ರನ್ನುಗಳನ್ನು ಬಾರಿಸಿ ಅಜೇಯವಾಗಿ ಉಳಿದರು.

No Comments

Leave A Comment