Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಹೊಸದುರ್ಗ ಕಾಂಗ್ರೆಸ್‌ ಶಾಸಕರ ಬೆಂಬಲಿಗರ ಗೂಂಡಾಗಿರಿ

ಚಿತ್ರದುರ್ಗ: ಅಕ್ರಮದ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ ವಿರುದ್ಧ ಹೊಸದುರ್ಗ  ಶಾಸಕರ ಬೆಂಬಲಿಗರು ಗೂಂಡಾಗಿರಿ ತೋರಿದ್ದು ಇಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿ  ಓರ್ವ ನನ್ನು ಕಿಡ್ನ್ಯಾಪ್‌ ಮಾಡಿರುವ ಆರೋಪ ಕೇಳಿ ಬಂದಿದೆ.

ಹೊಸದುರ್ಗದ ಅಲಘಟ್ಟ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಶಾಸಕರ  ಆಕ್ರಮದ ಕುರಿತು ಹೋರಾಟಕ್ಕಿಳಿದಿದ್ದ ಯೋಗೀಶ್‌ ಮತ್ತು ಸತೀಶ್‌ ಎನ್ನುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಇಬ್ಬರೂ ಆಸ್ಪತ್ರಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಊಟ ಮತ್ತು ಬಟ್ಟೆ ತೆಗೆದುಕೊಂಡು ಹೋಗುತ್ತಿದ್ದ ಸಂಬಂಧಿ ಗಂಗಾಧರ್‌ ಎನ್ನುವವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಕಿಡ್ನ್ಯಾಪ್‌ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದೀಗ ಗಂಗಾಧರ್‌ ಮೊಬೈಲ್‌ ಸ್ವಿಚ್‌ ಆಫ್ ಆಗಿದ್ದು ಆತಂಕ ಮೂಡಿದೆ ಎಂದು ಸಂಬಂಧಿಕರು ಹೇಳಿಕೊಂಡಿದ್ದಾರೆ.

ಪೊಲೀಸರಿಗೆ ದೂರು ನೀಡಿದರೂ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಸಂಬಂಧಿಕರು ನೋವು ತೋಡಿಕೊಂಡಿದ್ದಾರೆ.

No Comments

Leave A Comment