Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

“ಕೈ” ಪಡೆಯಲ್ಲಿ ರಾಹುಲ್ ಗಾಂಧಿ ಶಕೆ ಆರಂಭ, ಅಧಿಕಾರ ಸ್ವೀಕಾರ

ನವದೆಹಲಿ:ಸುಮಾರು 137 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನಿಗದಿಯಂತೆ ರಾಹುಲ್ ಗಾಂಧಿ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ಚುನಾವಣಾ ಸಮಿತಿ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ಅವರು ರಾಹುಲ್ ಗಾಂಧಿ ಆಯ್ಕೆಯನ್ನು ಘೋಷಿಸಿದರು.

ಮಗನಿಗೆ ಸೋನಿಯಾ ಗಾಂಧಿ ಅವರು ಅಧಿಕಾರವನ್ನು ಹಸ್ತಾಂತರಿಸುವ ಮೂಲಕ ನೆಹರೂ ಕುಟುಂಬದ 6ನೇ ವ್ಯಕ್ತಿ ರಾಹುಲ್ ಗಾಂಧಿ ಪಕ್ಷದ ಸಾರಥ್ಯ ವಹಿಸಿಕೊಂಡಂತಾಗಿದೆ.

19 ವರ್ಷಗಳ ಕಾಲ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿದ್ದರು. ಇಂದು ದೆಹಲಿಯ ಪಕ್ಷದ ಕಚೇರಿಯಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪದಗ್ರಹಣ ನಡೆಯಿತು.

ಪದಗ್ರಹಣ ಸಮಾರಂಭದಲ್ಲಿ ಎಐಸಿಸಿ ನಿರ್ಗಮನ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸೇರಿದಂತೆ ಸುಮಾರು 3ಸಾವಿರಕ್ಕೂ ಅಧಿಕ ಗಣ್ಯರು ಭಾಗವಹಿಸಿದ್ದರು.

ಎಲ್ಲೆಡೆ ಸಂಭ್ರಮಾಚರಣೆ:

ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪಕ್ಷದ ಕೇಂದ್ರ ಕಚೇರಿ ಸೇರಿದಂತೆ ಎಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಅಧ್ಯಕ್ಷೆಯಾಗಿ ಇದು ನನ್ನ ಕೊನೆಯ ಭಾಷಣ:ಸೋನಿಯಾ ಗಾಂಧಿ

ನಾನು ಅಧ್ಯಕ್ಷೆಯಾದ ಸಂದರ್ಭದಲ್ಲಿ ತುಂಬಾ ಕಠಿಣ ಸವಾಲುಗಳಿದ್ದವು, ಕಾಂಗ್ರೆಸ್ ದುರ್ಬಲವಾಗಿದ್ದಾಗ ನಾನು ಅಧ್ಯಕ್ಷೆಯಾಗಿದ್ದೆ. ಇಂದಿರಾಜಿ ನನ್ನ ಮಗಳಂತೆ ಕಂಡಿದ್ದರು. ಭಾರತೀಯ ಸಂಸ್ಕೃತಿಯನ್ನು ಇಂದಿರಾಜಿ ನನಗೆ ಕಲಿಸಿದರು.  ಅದರಂತೆ ಇಂದಿರಾ ಹತ್ಯೆಯಾದಾಗ ತಾಯಿಯನ್ನು ಕಳೆದುಕೊಂಡ ಅನುಭವವಾಗಿತ್ತು ಎಂದು ಸೋನಿಯಾ ಗಾಂಧಿ ಹೇಳಿದರು.

ಪುತ್ರ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಸಭೆಯನ್ನು ಉದ್ದೇಶಿಸಿ ನಿರ್ಗಮನ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ನೂತನವಾಗಿ ಅಧಿಕಾರ ವಹಿಸಿಕೊಂಡ ರಾಹುಲ್ ಗೆ ಅಭಿನಂದನೆ ಮತ್ತು ಸದಾ ಆಶೀರ್ವಾದ ಇದೆ ಎಂದರು.

ರಾಜೀವ್ ಗಾಂಧಿ ವಿವಾಹದ ಬಳಿಕ ನನಗೆ ರಾಜಕೀಯದ ಪರಿಚಯವಾಯಿತು. ನಾನು ಗಂಡ, ಮಕ್ಕಳನ್ನು ರಾಜಕೀಯವಾಗಿ ದೂರ ಇಡಲು ಬಯಸಿದ್ದೆ. ಆದರೆ ವಿಧಿಯಾಟ ಎಂಬಂತೆ ಎಲ್ಲವೂ ನಡೆದು ಹೋಯಿತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

No Comments

Leave A Comment