Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ದ್ವಿತೀಯ ಏಕದಿನ: ಭಾರತಕ್ಕೆ ಭರ್ಜರಿ ಜಯ, ಸರಣಿ 1-1ರಲ್ಲಿ ಸಮಬಲ

ಮೊಹಾಲಿ : ಇಂದಿಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ದದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಲಂಕೆಯನ್ನು 141 ರನ್‌ಗಳಿಂದ ಸೋಲಿಸಿ, 3 ಪಂದ್ಯಗಳ ಈ ಸರಣಿಯಲ್ಲಿ 1-1ರ ಸಮಬಲವನ್ನು ಸ್ಥಾಪಿಸಿದೆ.

ನಾಯಕ ರೋಹಿತ್‌ ಶರ್ಮಾ ಅವರ ಅಜೇಯ 208 ರನ್‌ಗಳೊಂದಿಗೆ ಶಿಖರ್‌ ಧವನ್‌ 68, ಶ್ರೇಯಸ್‌ ಅಯ್ಯರ್‌ 88 ನೆರವಿನಲ್ಲಿ ಭಾರತ ನಾಲ್ಕು ವಿಕೆಟ್‌ ನಷ್ಟಕ್ಕೆ 392 ರನ್‌ ಗಳ ಬೃಹತ್‌ ಮೊತ್ತವನ್ನು ಕಲೆ ಹಾಕಿತ್ತು.

ಗೆಲ್ಲಲು 50 ಓವರ್‌ಗಳಲ್ಲಿ  393 ರನ್‌ ತೆಗೆಯುವ ಕಷ್ಟಕರ ಗುರಿ ಪಡೆದ ಲಂಕಾ ಎಂಟು ವಿಕೆಟ್‌ ನಷ್ಟಕ್ಕೆ 251 ರನ್‌ ಮಾಡಲಷ್ಟೆ ಶಕ್ತವಾಗಿ ಸೋಲೋಪ್ಪಿಕೊಂಡಿತು.

ಲಂಕೆಯ ದಿಟ್ಟ ಹೋರಾಟದಲ್ಲಿ  ಏಂಜಲೋ ಮ್ಯಾಥ್ಯೂಸ್‌ ಅಜೇಯ 111 ರನ್‌  ಬಾರಿಸಿ ಮಿಂಚಿದರು. ಉಳಿದಂತೆ ಗುಣತಿಲಕ 16, ಲಾಹಿರು 21, ಡಿಕ್‌ವೆಲಾ 22, ಗುಣರತ್ನೆ 34 ರನ್‌ ಬಾರಿಸಿದರು.

ಭಾರತದ ಎಸೆಗಾರರ ಪೈಕಿ ಯಜುವೇಂದ್ರ ಚಾಹಲ್‌ 3 ವಿಕೆಟ್‌ ಕಿತ್ತರೆ ಬುಮ್ರಾ 2 ವಿಕೆಟ್‌ ಪಡೆದರು; ಭುವನೇಶ್ವರ ಕುಮಾರ್‌, ಪಾಂಡ್ಯಾ ಮತ್ತು ಸುಂದರ್‌ ತಲಾ 1 ವಿಕೆಟ್‌ ಪಡೆದರು.

No Comments

Leave A Comment