Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

4 ಸಿಆರ್ಪಿಎಫ್ ಯೋಧರನ್ನು ಹತ್ಯೆಗೈದ ಮತ್ತೊರ್ವ ಯೋಧ

ರಾಯ್ ಪುರ: ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಕೇಂದ್ರೀಯ ಮೀಸಲು ಪಡೆ(ಸಿಆರ್ಪಿಎಫ್) ಯೋಧನೊಬ್ಬ ನಾಲ್ವರು ಸಹೋದ್ಯೋಗಿಗಳನ್ನು ಕ್ಯಾಂಪ್ ನಲ್ಲೇ ಹತ್ಯೆಗೈದಿದ್ದಾರೆ.

ಸಹೋದ್ಯೋಗಿಗಳೊಂದಿಗೆ ಮಾತಿನ ಚಕಮಿಕಿ ನಡೆದಿದ್ದು ನಂತರ ಕಾನ್ ಸ್ಟೆಬಲ್ ಸನತ್ ಕುಮಾರ್ ಗುಂಡು ಹಾರಿಸಿದ್ದಾನೆ. ಮೃತರಲ್ಲಿ ಇಬ್ಬರು ಸಬ್ ಇನ್ ಸ್ಪೆಕ್ಟರ್ ಆಗಿದ್ದು ನಾಲ್ವರು ಸನತ್ ಕುಮಾರ್ ಗಿಂತ ಹಿರಿಯ ಹುದ್ದೆಯಲ್ಲಿದ್ದರು.

ಸನತ್ ಕುಮಾರ್ ಉತ್ತರಪ್ರದೇಶದ ಫಿರೋಜಾಬಾದ್ ಮೂಲದವರಾಗಿದ್ದಾರೆ. ಬಸಗುಡಾದಲ್ಲಿ ನಕ್ಸಲ್ ನಿಗ್ರಹ ದಳದಲ್ಲಿ ಈ ಘಟನೆ ನಡೆದಿದೆ. ಶೂಟ್ ಔಟ್ ನಲ್ಲಿ ಓರ್ವ ಎಎಸ್ಐಗೆ ಗಾಯವಾಗಿದ್ದು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದ್ದು ಛತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಈ ಘಟನೆಯನ್ನು ಖಂಡಿಸಿದ್ದಾರೆ.

No Comments

Leave A Comment