Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಉಡುಪಿ ಶ್ರೀ ಪಲಿಮಾರು ಮಠದ ಪರ್ಯಾಯದ ಪೂರ್ವಭಾವಿಯಾಗಿ ಭತ್ತ ಮುಹೂರ್ತ-ಚಪ್ಪರ ಮುಹೂರ್ತ-ಕಟ್ಟಿಗೆ ರಥಕ್ಕೆ ಕಲಶ ಸ್ಥಾಪನೆ

ಉಡುಪಿ ಶ್ರೀ ಪಲಿಮಾರು ಮಠದ ಪರ್ಯಾಯದ ಪೂರ್ವಭಾವಿಯಾಗಿ ಕೊನೆಯ ಮುಹೂರ್ತವಾದ  ಭತ್ತ ಮುಹೂರ್ತವು ಮಠದ ಪುರೋಹಿತರಾದ ಹೆರ್ಗ ವೇದವ್ಯಾಸ ಭಟ್ ಇವರ ನಿರ್ದೇಶನದಲ್ಲಿ  ನಡೆಯಿತು.

ಈ ಸಂದರ್ಭದಲ್ಲಿ ಮಠದ ದಿವಾನರಾದ ವೇದವ್ಯಾಸ ತಂತ್ರಿಗಳು,ಮಠದ ಪುರೋಹಿತರಾದ ಹೆರ್ಗ ವೇದವ್ಯಾಸ ಭಟ್, ಪರ್ಯಾಯ ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ,ಅದಮಾರು ಮಠದ ದಿವಾನರಾದ ವೆಂಕಟರಮಣ ಮುಚ್ಚಿನ್ತಯಾ, ಕಟೀಲು ದೇವಸ್ಥಾನದ ಅರ್ಚಕರಾದ ಹರಿನಾರಾಯಣ ಅಸ್ರಣ್ಣ,ಕಮಲಾದೇವಿ ಅಸ್ರಣ್ಣ  ,ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಬಾಲಾಜಿ ರಾಘವೇಂದ್ರ ಆಚಾರ್ಯ, ಮುಚ್ಚಿನ್ತಯಾ,ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ  ಮಟ್ಟು ಲಕ್ಷ್ಮೀನಾರಾಯಣ ರಾವ್,  ಪದ್ಮನಾಭ ಭಟ್,ಖಜಾಂಚಿ ರಮೇಶ್ ರಾವ್ ಬೀಡು,ಹಾಗೂ ಜೊತೆ ಕಾರ್ಯದರ್ಶಿಗಳಾದ ವಿಷ್ಣುಪ್ರಸಾದ್ ಪಾಡಿಗಾರ್ ಸಮಿತಿಯ ಪದಾಧಿಕಾರಿಗಳು   ಮೊದಲಾದವರು ಉಪಸ್ಥಿತರಿದ್ದರು

No Comments

Leave A Comment