Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಮುಂಬಯಿ:ಡಿಸೆಂಬರ್‌ನಲ್ಲಿ 50 ವರ್ಷದಲ್ಲಿಯೇ ಅಧಿಕ ಮಳೆ

ಮುಂಬಯಿ: ಒಖಿ ಚಂಡಮಾರುತದ ಪರಿಣಾಮ ನಗರದಲ್ಲಿ  ಮಂಗಳವಾರ ಭಾರೀ ಮಳೆ ಸುರಿದಿದ್ದು  ಕಳೆದ  50 ವರ್ಷಗಳ ಅವಧಿಯಲ್ಲಿ  ನಗರದಲ್ಲಿ ದಾಖಲೆ ಪ್ರಮಾಣದಲ್ಲಿ  ಮಳೆಯಾಗಿವೆ. ಮಂಗಳವಾರದಂದು  ಕೇವಲ 12 ತಾಸುಗಳ  ಅವಧಿ ಯಲ್ಲಿ  ಭಾರತೀಯ ಹವಾಮಾನ ಇಲಾಖೆಯ  ಸಂತಾಕ್ರೂಜ್‌ ಸರ್ವೇಕ್ಷಣಾಲಯದಲ್ಲಿ  36 ಮಿ.ಮೀ. ಮಳೆ  ದಾಖಲಾಗಿದೆ. ಈ ಹಿಂದೆ ಅಂದರೆ 1967ರ ಡಿ. 12ರಂದು  31.4 ಮಿ.ಮೀ. ಮಳೆ  ಸುರಿದಿದ್ದುದು  ಈವರೆಗಿನ ದಾಖಲೆಯಾಗಿತ್ತು.

ಒಖೀ ಚಂಡಮಾರುತ ಮಂಗಳವಾರದಂದು ನಗರವನ್ನು ಸಮೀಪ ಹಾದುಹೋದ  ಹಿನ್ನೆಲೆಯಲ್ಲಿ  ನಗರದಾದ್ಯಂತ  ಭಾರೀ ಗಾಳಿಮಳೆಯಾಗಿತ್ತು. ಇದರ  ಪರಿಣಾಮ ನಗರದಲ್ಲಿ  ತಾಪಮಾನದಲ್ಲಿ  ಭಾರೀ ಇಳಿಕೆ ಕಂಡುಬಂತು.

ಸಂತಾಕ್ರೂಜ್‌ ಮತ್ತು ಕೊಲಾಬಾದಲ್ಲಿನ  ಹವಾಮಾನ ಇಲಾಖೆಯ ಸರ್ವೇಕ್ಷಣಾಲಯದಲ್ಲಿ  ಮಂಗಳ ವಾರದಂದು  ಸೋಮವಾರ  ದಾಖಲಾದ  ಗರಿಷ್ಠ ತಾಪಮಾನಕ್ಕಿಂತ  ಸುಮಾರು 10 ಡಿ.ಸೆ.ಗಳಷ್ಟು  ಕಡಿಮೆ  ತಾಪಮಾನ ದಾಖಲಾಯಿತು.

No Comments

Leave A Comment