Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಉಡುಪಿಗೆ ರವಿಶಂಕರ್ ಗುರೂಜಿ ಭೇಟಿ; ಪೇಜಾವರಶ್ರೀಗಳ ಜತೆ 30ನಿಮಿಷ ಮಾತುಕತೆ

ಉಡುಪಿ: ಇತ್ತೀಚೆಗಷ್ಟೇ ಉಡುಪಿಯಲ್ಲಿ ನಡೆದಿದ್ದ ಧರ್ಮ ಸಂಸದ್ ನಿಂದ ದೂರ ಉಳಿದಿದ್ದ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಬುಧವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಪೇಜಾವರಶ್ರೀಗಳ ಜತೆ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು.

ಇಂದು ಶ್ರೀಕೃಷ್ಣ ಮಠದಲ್ಲಿ ರವಿಶಂಕರ್ ಗುರೂಜಿ ಅವರು ಪೇಜಾವರಶ್ರೀಗಳನ್ನು ಭೇಟಿಯಾಗಿ ರಾಮಮಂದಿರ ನಿರ್ಮಾಣದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಆದರೆ ಚರ್ಚೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪೇಜಾವರಶ್ರೀಗಳು, ಮಾತುಕತೆ ವಿವರ ಹೇಳಲ್ಲ ಎಂದರು. ರವಿಶಂಕರ ಗುರೂಜಿಗೆ ಧರ್ಮ ಸಂಸದ್ ವಿರೋಧಿಸಿಲ್ಲ. ಅಯೋಧ್ಯೆ ವಿವಾದ ನ್ಯಾಯಾಲಯಗಳ ಹೊರಗೆ ತೀರ್ಮಾನವಾಗಲಿ ಎಂಬುದೇ ಎಲ್ಲರ ಆಶಯ ಎಂದು ಹೇಳಿದರು.

No Comments

Leave A Comment